
ಚಿಕ್ಕಮಗಳೂರು: ಹಾಲಿಗೆ ಸಕ್ಕರೆ ಬದಲು ಯೂರಿಯಾ ಗೊಬ್ಬರ ಹಾಕಿ ಶಾಲೆಯ ಅಡುಗೆ ಸಿಬ್ಬಂದಿ ಎಡವಟ್ಟು ಮಾಡಿದ್ದು, ಆ ಹಾಲು ಸೇವಿಸಿ 19 ಮಕ್ಕಳು ಅಸ್ವಸ್ಥಗೊಂಡಿದ್ದಾರೆ.
ಕೊಪ್ಪ ತಾಲೂಕಿನ ನಿಲುವಾಗಿಲು ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿಈ ಘಟನೆ ನಡೆದಿದೆ. ಅಸ್ವಸ್ಥಗೊಂಡಿರುವ ಮಕ್ಕಳನ್ನು ಹರಿಹರಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಡುಗೆ ಸಿಬ್ಬಂದಿ ಗುಲಾಬಿ, ಶಾರದಾ, ಯಶೋದಮ್ಮ ಅವರನ್ನು ಹರಿಹರಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Comments are closed.