
ರಾಯಚೂರು: ಕೊಡಗು ನೆರೆ ಸಂತ್ರಸ್ತರಿಗೆ ಕೇಂದ್ರ ನೀಡಿದ 500 ಕೋಟಿ ರು. ಯಾವುದಕ್ಕೂ ಸಾಲದು. ಒಟ್ಟು 8 ಸಾವಿರ ಕೋಟಿ ರೂ. ಹಾನಿ ಅಂದಾಜಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದ್ದಾರೆ.
ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನೆ ಹಿನ್ನೆಲೆಯಲ್ಲಿ ಇಲ್ಲಿಗೆ ಆಗಮಿಸಿ ದರ್ಶನ ಪಡೆದ ನಂತರ ಮಾತನಾಡಿದರು.
ರಾಜ್ಯ ಸರಕಾರ ತನ್ನದೇ ಆದ ರೀತಿಯಲ್ಲಿ ನೆರೆ ಪರಿಹಾರ ಕಾರ್ಯ ಕೈಗೊಳ್ಳುತ್ತಿದೆ. ಕೇಂದ್ರ ಸರಕಾರ ಸಹ ರಾಜ್ಯಕ್ಕೆ ಅಗತ್ಯ ಪ್ರಮಾಣದಲ್ಲಿ ನೆರವಾಗಬೇಕು. ರಾಜಕೀಯದ ಬಗ್ಗೆ ಮಂತ್ರಾಲಯದಲ್ಲಿ ಮಾತನಾಡಲ್ಲ ಎಂದರು
ಗೌಡರ ಕುಟುಂಬ ಹಿಂದಿನಿಂದಲೂ ಮಂತ್ರಾಲಯದ ರಾಯರ ಭಕ್ತರು. ಹೀಗಾಗಿ ಆರಾಧನೆಗೆ ರಾಯರ ದರ್ಶನಕ್ಕೆ ಆಗಮಿಸಿರುವೆ. ವಯಸ್ಸಾಗಿದೆ ಹೀಗಾಗಿ ರಾಯರ ಕರುಣೆ ನನ್ನ ಆರೋಗ್ಯ ಕಾಪಾಡಲೆಂದು ಬೇಡಿಕೊಂಡೆ. ಬರ ನೀಗಲಿ ನೆರೆ ಸಂತ್ರಸ್ತರ ಬದುಕು ಯಥಾಸ್ಥಿತಿಗೆ ಮರಳಲೆಂದು ರಾಯರಲ್ಲಿ ಪ್ರಾರ್ಥಿಸಿದೆ ಎಂದು ದೇವೇಗೌಡ ತಿಳಿಸಿದರು.
Comments are closed.