ಕರ್ನಾಟಕ

ನಾನು ಮುಖ್ಯಮಂತ್ರಿಯಾಗಬೇಕೆಂಬುದು ಜನರ ಆಶಯ; ಸಿದ್ದರಾಮಯ್ಯ

Pinterest LinkedIn Tumblr


ಮೈಸೂರು: ಇದೇ ನನ್ನ ಕೊನೆಯ ಚುನಾವಣೆ ಎಂದು ಘೋಷಣೆ ಮಾಡುತ್ತಿದ್ದ ಮಾಜಿ ಸಿದ್ದರಾಮಯ್ಯ ಈಗ ತಮ್ಮ ವರಸೆ ಬದಲಿಸಿದ್ದಾರೆ. ಜನರು ಆಶೀರ್ವದಿಸಿದರೆ ಮತ್ತೊಮ್ಮೆ ತಾವು ಮುಖ್ಯಮಂತ್ರಿಯಾಗುವುದು ಖಚಿತ ಎಂದು ಕಳೆದ ಮೂರು ದಿನಗಳಿಂದ ಹೇಳಿಕೆ ನೀಡುತ್ತ ರಾಜಕೀಯ ಬಿರುಗಾಳಿ ಎಬ್ಬಿಸಿದ್ದಾರೆ.

ಭಾನುವಾರ ನಗರದಲ್ಲಿ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿದ್ದರಾಮಯ್ಯ, ಜನರು ಆಶೀರ್ವದಿಸಿದರೆ ಸಿಎಂ ಆಗುತ್ತೀನಿ ಎಂದಿದ್ದು ನಿಜ. ಆದರೆ 2023ಕ್ಕೆ ಎಂದು ಸಿದ್ದರಾಮಯ್ಯ ಹೇಳಿದರು.

ನಾನು ಸಿಎಂ ಆಗಬೇಕೆಂಬುದು ಜನರ ಆಶಯ. ಮುಂದಿನ ಬಾರಿ ಕಾಂಗ್ರೆಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುತ್ತದೆ. ಮುಂದಿನ ಚುನಾವಣೆ ಇದೆಯಲ್ಲಾ, ನೋಡೋಣ ಎಂದರು

ನೀವು ಸಿಎಂ ಆಗಬೇಕೆಂದು ಹಾಸನದಲ್ಲಿ ಜನ ಹೇಳಿದರು. ಆ ಸಮಾರಂಭದಲ್ಲಿ ಜನರಿಗೆ ಆಯ್ತು ಅಂತ ಹೇಳಿದ್ದೆ ಅಷ್ಟೇ. ಚುನಾವಣೆಗೆ ಸ್ಪರ್ಧಿಸಬೇಕಾ, ಬೇಡವಾ ಅಂತ ಮುಂದೆ ತೀರ್ಮಾನಿಸುತ್ತೇನೆ. ಇನ್ನೂ ಚುನಾವಣೆಗೆ ಸಾಕಷ್ಟು ಸಮಯವಿದೆ ಎಂದು ಸುಮ್ಮನಾದರು.

ಮಾಧ್ಯಮ ಸಂವಾದಲ್ಲಿ ಮುಂದುವರೆದು ಮಾತನಾಡಿದ ಅವರು ಕೇಂದ್ರ ಸರ್ಕಾರದ ವಿರುದ್ಧವೂ ವಾಗ್ಧಾಳಿ ನಡೆಸಿದರು. ಕೇಂದ್ರ ಸರ್ಕಾರ ಕರ್ನಾಟಕದೊಂದಿಗೆ ಮಲತಾಯಿ ಧೋರಣೆ ಮಾಡುತ್ತಿದೆ. ಕೊಡಗು ಪ್ರವಾಹ ಹಾನಿ ಅಂದಾಜು ಮಾಡಲು ಪ್ರಧಾನಿ ಪ್ರತಿನಿಧಿಯಾಗಿ ಬಂದ ರಕ್ಷಣಾ ಸಚಿವೆ ಏನೂ ಘೋಷಣೆ ಮಾಡಿಲ್ಲ, ಸಾವಿರಾರು ಜನ ಬೀದಿಪಾಲಾಗಿದರೂ ರಕ್ಷಣಾ ಸಚಿವೆ ಏನೂ ಘೋಷಿಸಿಲ್ಲ. ಕೇರಳ ಸರ್ಕಾರ ಪ್ರಸ್ತಾಪ ಕಳುಹಿಸದಿದ್ರೂ ಪರಿಹಾರ ಘೋಷಿಸಿದ ಕೇಂದ್ರ ಕರ್ನಾಟಕದ ವಿಷಯದಲ್ಲಿ ತಾರತಮ್ಯ ಮಾಡುತ್ತಿದೆ.

ಇಲ್ಲಿಗೆ ಬಂದಾಗ ಕೇಂದ್ರ ಸಚಿವೆ ಉಸ್ತುವಾರಿ ಸಚಿವರೊಂದಿಗೆ ನಡೆದುಕೊಂಡ ರೀತಿ ಸರಿಯಿಲ್ಲ. ಕೊಡಗಿನಲ್ಲಿ ಭಾರೀ ಅನಾಹುತವಾಗಿದ್ದು, ಈ ಬಗ್ಗೆ ಬಿಜೆಪಿ ನಾಯಕರು ಕೇಂದ್ರಕ್ಕೆ ಮನವರಿಕೆ ಮಾಡುವಲ್ಲಿ ವಿಫಲವಾಗಿದೆ. ಕೊಡಗಿನ ಹಾನಿಗೆ ಕೇಂದ್ರದಿಂದ ಏನು ಕೊಡ್ಸಿದ್ದಾರೆ ಎಂಬುದನ್ನು ಬಿಜೆಪಿಯವರು ಹೇಳಲಿ ಎಂದು ಸವಾಲು ಹಾಕಿದರು.

ಮೈಸೂರು ಅಭಿವೃದ್ಧಿಯಾಗಿದ್ದರೆ ಅದು ಕಾಂಗ್ರೆಸ್​ ಕಾಲದಲ್ಲಿ ಮಾತ್ರ. ಮೈಸೂರು ನಗರದ ಅಭಿವೃದ್ಧಿ ಬಿಜೆಪಿ, ಜೆಡಿಎಸ್ ಏನೂ ಕೊಟ್ಟಿಲ್ಲ ಎಂದು ಕೂಡ ಸಮರ್ಥಿಸಿ ಕೊಂಡರು. ಮೈಸೂರು ನಗರಾಭಿವೃದ್ಧಿಗೆ ನಮ್ಮ ಸರ್ಕಾರ 2532 ಕೋಟಿ ನೀಡಿದೆ ಎಂದರು.

ಕಾಂಗ್ರೆಸ್​ಗೆ ಅಧಿಕಾರ ವಿಕೇಂದ್ರಿಕರಣ ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿದೆ. ದಲಿತರು, ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಿರುವುದು ಕಾಂಗ್ರೆಸ್. ಈ ಮೀಸಲಾತಿಯನ್ನು ಬಿಜೆಪಿ ಯಾವಗಲೂ ವಿರೋಧಿಸಿದೆ ಎಂದರು.

Comments are closed.