ಕರ್ನಾಟಕ

ಕೊಡಗು: 1994ರಿಂದ ಇಂತಹ ಮಳೆ ಕಂಡಿರಲಿಲ್ಲ!

Pinterest LinkedIn Tumblr


ಬೆಂಗಳೂರು: ಕೊಡಗಿನಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು ಕಂಡು ಕೇಳರಿಯದಷ್ಟು ಅನಾಹುತಗಳಾಗುತ್ತಿವೆ. 1994ರ ಆಗಸ್ಟ್ 16ರ ವರೆಗೆ ಅತಿ ಹೆಚ್ಚಿನ ದಾಖಲೆಯ ಮಳೆಯಾಗಿತ್ತು.
ಆಗಸ್ಟ್ ತಿಂಗಳೊಂದನ್ನೇ ಪರಿಗಣಿಸಿದರೇ 2007 ರಲ್ಲಿ ಅತಿ ಹೆಚ್ಚು ಮಳೆಯಾಗಿತ್ತು. ಆಗಸ್ಟ್ ತಿಂಗಳು ಕೊನೆಗೊಳ್ಳುವುದಕ್ಕೆ ಇನ್ನೂ 10-12 ದಿನ ಬಾಕಿಯಿದ್ದು ಅಷ್ಟರಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆಯಿದ್ದು, ಈ ಶತಮಾನದಲ್ಲೇ ಅತಿ ಹೆಚ್ಚಿನ ಮಳೆಯಾಗಲಿದೆ.
ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ, ಪದೇ ಪದೇ ಉಂಟಾಗುತ್ತಿರುವ ಭೂ ಕುಸಿತದಿಂದಾಗಿ ಜೀವ ಮತ್ತು ಹೆಚ್ಚಿನ ಆಸ್ತಿ ಪಾಸ್ತಿ ನಷ್ಟವಾಗುತ್ತಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಮಳೆಯ.ತೀವ್ರತೆ ಕಡಿಮೆಯಾಗುವ ಸಾಧ್ಯತೆಯಿದೆ, ಭಾರೀ ಮಳೆಯಾಗುವ ನಿರೀಕ್ಷೆ ಮಾಡಲಾಗಿದೆ,.ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಆರಂಭವಾಗಿದೆ,
1986 ರಲ್ಲಿ ಆಗಸ್ಟ್ 1 ರಿಂದ 16ರವರೆಗೆ ದಾಖಲೆಯ ಮಳೆಯಾಗಿಕತ್ತು ಅದಾದ ನಂತರ 2 ಬಾರಿ ಜಿಲ್ಲೆಯಲ್ಲಿ ಸಹಜ ಮಳೆಯಾಗಿತ್ತು.2018ರ ಆಗಸ್ಟ್ ತಿಂಗಳಲ್ಲಿ ಅದೇ ದಿನಾಂಕದ ವರೆಗೂ ಶೇ. 41ರಷ್ಟು ಹೆಚ್ಚು ಮಳೆಯಾಗಿದೆ,.ಮಮಾಲಿಯಾಗಿ ಕೊಡಗಿನಲ್ಲಿ 2100 ಮಿಮಿ ಮಳೆಯಾಗುತ್ತಿತ್ತು, ಆದರೆ ಈ ಬಾರಿ 3000 ಮಿಮೀ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.