ಕರ್ನಾಟಕ

ಕೊಡಗು: ಪ್ರವಾಹದಲ್ಲಿ ತನ್ನ ಕಣ್ಣೆದುರೇ ತನ್ನ ತಾಯಿ ಕೊಚ್ಚಿಹೋದಳು

Pinterest LinkedIn Tumblr


ಮಡಿಕೇರಿ: ಕಳೆದ ಹಲವು ದಿನಗಳಿಂದ ಕೊಡಗಿನಲ್ಲಿ ಉಂಟಾಗಿರುವ ಪ್ರವಾಹದಲ್ಲಿ ಸುಮಾರು 8 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೊಡಗು ಜಿಲ್ಲಾಡಳಿತ ಘೋಷಿಸಿದೆ. ಪ್ರವಾಹದಲ್ಲಿ ಕಣ್ಣೆದುರೇ ತನ್ನ ತಾಯಿ ಕೊಚ್ಚಿಹೋದ ಮನಕಲಕುವ ಘಟನೆ
ನಡೆದಿದೆ.
ಹೆಬ್ಬಟ್ಟಗೇರಿಯಲ್ಲಿ ಮಿಟ್ಟು ಗಣಪತಿ ಎಂಬುವರ ತಾಯಿ ಮಿನ್ನಂಡ ಉಮ್ಮವ್ವ ತನ್ನನ್ನು ರಕ್ಷಿಸುವಂತೆ ಮಗನ ಸಹಾಯ ಕೋರಿದರು, ಆದರೆ ಭೂಕುಸಿತದಿಂದ ಉಂಟಾದ ಪ್ರವಾಹದಲ್ಲಿ ಅವರ ಮನೆಯ ಜೊತೆ ತಾಯಿಯೂ ಕೊಚ್ಚಿ ಹೋಗಿದ್ದಾರೆ.
ಭೂಕುಸಿತದ ಅವಶೇಷಗಳಡಿ ಸಿಲುಕಿದ ಆಕೆ ಸಹಾಯ ಮಾಡುವಂತೆ ಕೈ ಬೀಸುತ್ತಿದ್ದಳು, ಆಕೆ ನನ್ನ ಕಣ್ಣುಮುಂದೆ ಕೊಚ್ಚಿಹೋಗುತ್ತಿದ್ದರೂ ನಾನು ಏನು ಮಾಡಲಾಗದ ಅಸಹಾಯಕನಾಗಿದ್ದೆ ಎಂದು ಗಣಪತಿ ಹೇಳಿದ್ದಾರೆ.

ಗಣಪತಿ ತನ್ನ ತಾಯಿ , ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಹೆಬ್ಬಟ್ಟಗೇರಿಯ ಮನೆಯಲ್ಲಿ ವಾಸವಿದ್ದರು,.ರೈತ ನಾಗಿರುವ ಗಣಪತಿ 6 ತಿಂಗಳ ಹಿಂದೆ ಹೊಸ ಮನೆ ಕಟ್ಟಿಸಿ ಅದರಲ್ಲಿ ಬಾಳಿ ಬದುಕಬೇಕೆಂಬ ಆಸೆಯಲ್ಲಿದ್ದರು, ಆದರೆ ವಿಧಿ ಲಿಖಿತವೇ ಬೇರೆಯಾಗಿತ್ತು.
ಆಗಸ್ಟ್ 15ರ ಬೆಳಗ್ಗೆ ಗಣಪತಿ ಅವರು ಕುಟುಂಬ ಉಪಹಾರ ಸೇವಿಸತ್ತಿತ್ತು, ಒಬ್ಬ ವ್ಯಕ್ತಿ ಬಂದು ಮಡಿಕೇರಿಗೆ ಹೋಗುವ ದಾರಿ ತೋರಿಸಿ ಎಂದು ಗಣಪತಿ ಅವರಿಗೆ ಕೇಳಿದ್ದಾನೆ, ಈ ವೇಳೆ ಗಣಪತಿ ಅವರ ಕುಟುಂಬಕ್ಕೆ ದೊಡ್ಡ ಶಬ್ದ ಕೇಳಿ ಬಂದಿದೆ.ದೂರದಲ್ಲಿ ಒಂದು ಮರ ಬಿದ್ದಿರುವುದು ಕಾಣಿಸಿತು.
ದೊಡ್ಡದಾದ ಭೂಕುಸಿತ ನಾವು ಮುಂದೆ ಹೆಜ್ಜೆ ಇಡದಂತೆ ನಿಲ್ಲಿಸಿತು. ಈ ವೇಳೆ ನಮ್ಮ ತಾಯಿ ಕೆಳಗಿನ ಮನೆಯಲ್ಲಿದ್ದರು. ಭೂಕುಸಿತ ಆಕೆಯನ್ನು ಎಳೆದುಕೊಂಡಿತು. ಆಕೆಯ ಎರಡು ಕೈಗಳು ಸಹಾಯ ಮಾಡುವಂತೆ ನನ್ನನ್ನು ಕರೆಯುತ್ತಿತ್ತು, ಜೊತೆಗೆ ಆಕೆ ಕಾಪಾಡಿ ಎಂದು ಕೂಗುತ್ತಿದ್ದರು, ನಾನು ಆಕೆ ಇರುವಲ್ಲಿಗೆ ತಲುಪುವಷ್ಟರಲ್ಲಿ ಭೂ ಕುಸಿತದ ಮಣ್ಣಿನ ಜೊತೆ ಅಮ್ಮ ಕಿಮೀ ದೂರ ಕೊಚ್ಚಿಹೋದಳು ಎಂದು ಗಣಪತಿ ಒದ್ದೆ ಕಣ್ಣಿನಿಂದ ಸ್ಮರಿಸಿದರು.

Comments are closed.