ಕರ್ನಾಟಕ

37 ಸಾವಿರ ಕೋಟಿ ರೈತರ ಸಾಲಮನ್ನಾಕ್ಕೆ ಆದೇಶ: ಕುಮಾರಸ್ವಾಮಿ

Pinterest LinkedIn Tumblr


ಹಾಸನ: ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪ್ರಣಾಳಿಕೆಯಲ್ಲಿ ಹಾಗೂ ಬಜೆಟ್ ನಲ್ಲಿ ಹೇಳಿದಂತೆ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಇರುವ ರೈತರ 37 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಲು ಮುಂದಿನ ಗುರುವಾರ ಆದೇಶ ನೀಡುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಹಾಸನದ ಹರದನಹಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆರ್ಥಿಕ ಶಿಸ್ತು ಉಲ್ಲಂಘಿಸದೆ ರೈತರ ಸಾಲಮನ್ನಾ ಮಾಡಲು ಕ್ರಮ ಕೈಗೊಂಡಿದ್ದೇನೆ. ರೈತರ ಎರಡು ಲಕ್ಷದವರೆಗಿನ ಸಾಲಮನ್ನಾ ಮಾಡಲು ಆದೇಶ ನೀಡುವುದಾಗಿ ಹೇಳಿದರು.

ಮುಂದಿನ ವರ್ಷವೇ ಬ್ಯಾಂಕ್ ಗಳಿಗೆ ಹಣ ನೀಡಲು ತಯಾರಿ ನಡೆದಿದೆ. ನಾನೇನು ಮಂತ್ರದಂಡ ಹಿಡಿದು ಕೆಲಸ ಮಾಡಿಲ್ಲ.ಸೋರಿಕೆ ತಡೆದಿದ್ದು ಆದಾಯ ಹೆಚ್ಚಿದೆ ಎಂದರು.

ನಾನು ಅಧಿಕಾರಕ್ಕೆ ಏರಿದ ಮೇಲೆ ಶೇ.32ರಷ್ಟು ಆದಾಯ ಏರಿಕೆ ಆಗಿದೆ ಎಂದರು. ಈ ವರ್ಷ ರಾಷ್ಟ್ರೀಕೃತ ಬ್ಯಾಂಕ್ ಸಾಲಮನ್ನಾಕ್ಕೆ 6,500 ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದರು.

Comments are closed.