ಕರ್ನಾಟಕ

ಮೈತ್ರಿ ಸರ್ಕಾರದ ವಿರುದ್ಧ ಸಿಲಿಕಾನ್​ ಸಿಟಿಯಿಂದಲೇ ಹೋರಾಟದ ಕಹಳೆಗೆ ಮುಂದಾದ ಬಿಜೆಪಿ

Pinterest LinkedIn Tumblr


ಬೆಂಗಳೂರು (ಆ.12): ಮೈತ್ರಿ ಸರ್ಕಾರದ ನಡುವೆ ಒಳವೈಮನಸ್ಸು ಇದ್ದರೂ ಸರ್ಕಾರ ನಡೆಸುವ ಒಂದೇ ಉದ್ದೇಶದಿಂದ ಅವರು ಹೊಂದಾಣಿಕೆ ಆಡಳಿತ ನಡೆಸುತ್ತಿದ್ದಾರೆ. ಅವರ ವಿರುದ್ಧ ಬೇರೆ ಕ್ಷೇತ್ರಗಳಿಗಿಂತ ಸಿಲಿಕಾನ್​ ಸಿಟಿಯಿಂದಲೇ ಹೋರಾಟ ಆರಂಭಿಸಬೇಕಾದ ಅವಶ್ಯಕತೆ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ರಣಕಹಳೆ ಮೊಳಗಿಸಿದ್ದಾರೆ.

ಬೆಂಗಳೂರಿನಲ್ಲಿ ನಗರ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭಾ, ಸ್ಥಳೀಯ ಸಂಸ್ಥೆ ಚುನಾವಣೆ ಗೆಲುವಿಗೆ ರಣತಂತ್ರ ರೂಪಿಸಿರುವ ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ನಡೆದ ತಪ್ಪುಗಳ ಅವಲೋಕನ ನಡೆಸಿದರು. ಅಲ್ಲದೇ ಯಾವ ಲೆಕ್ಕಾಚಾರ ನಡೆಸಿದರೆ ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದು ಎಂಬ ಬಗ್ಗೆ ಚರ್ಚೆ ನಡೆಸಿದರು.

ನೈತಿಕತೆ ಇಲ್ಲದ ಮೈತ್ರಿ ಸರ್ಕಾರ:

ಸಮ್ಮಿಶ್ರ ಸರ್ಕಾರ ನೈತಿಕತೆ ಕಳೆದುಕೊಂಡಿದೆ . ಕಾಂಗ್ರೆಸ್ ಅವ್ಯವಹಾರ ಬಯಲು ಮಾಡಲು ಜೆಡಿಎಸ್ ರೆಡಿಯಿಲ್ಲ. ಜೆಡಿಎಸ್ ಅವ್ಯವಹಾರ ಬಯಲು ಮಾಡಲು ಕಾಂಗ್ರೆಸ್ ಸಿದ್ಧವಿಲ್ಲ. ಈ ಇಬ್ಬರು ಹೊಂದಾಣಿಕೆ ಮೂಲಕ ಆಡಳಿತ ನಡೆಸುತ್ತಿದ್ದಾರೆ. ಎರಡು ಪಕ್ಷಗಳ ವಿರುದ್ಧ ಹೋರಾಟ ಕೈಗೊಂಡ್ರೆ ಸಮ್ಮಿಶ್ರ ಸರ್ಕಾರ ಇರಲ್ಲ. ಈ ಹಿನ್ನಲೆ ಬೆಂಗಳೂರು ಸೇರಿ ಎಲ್ಲಾ ಜಿಲ್ಲೆಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು

ರಾಜ್ಯದ ಯಾವುದೋ ಒಂದು ಮೂಲೆಯಲ್ಲಿ ಪ್ರತಿಭಟಿಸುವುದಕ್ಕಿಂತ ಬೆಂಗಳೂರಿನಲ್ಲಿ ಪ್ರತಿಭಟಿಸುವುದು ಮುಖ್ಯ. ಬೆಂಗಳೂರಿನಲ್ಲಿ ಪ್ರತಿಭಟಿಸಿದರೆ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಒಂದು ಸಂದೇಶ ನೀಡಿದಂತೆ ಆಗುತ್ತದೆ. ಯಾವ ಸಮಯದಲ್ಲಾದರೂ ಸರ್ಕಾರ ಮನೆಗೆ ಹೋಗುತ್ತದೆ ಎಂದು ಹೋರಾಟಕ್ಕೆ ಸಜ್ಜುಗೊಳ್ಳುವಂತೆ ಕರೆ ನೀಡಿದರು.

ಅಧಿಕಾರ ತಪ್ಪಿದ್ದಕ್ಕೆ ಬೇಸರ:

ಬದಾಮಿಯಲ್ಲಿ ನಾವೇನಾದರೂ ಒಂದು ದಿನ ಪ್ರಚಾರ ನಡೆಸಿದರೆ ಸಿದ್ದರಾಮಯ್ಯ ಅವರನ್ನು ಸೋಲಿಸಬಹುದಿತ್ತು. ಈ ಮೂಲಕ ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆ ಉಂಟಾಗಿದೆ ಆದರೆ ಈ ಪರಿಣಾಮವಾಗಿ ನಾವು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವಂತೆ ಆಯಿತು ಎಂದು ಬಿಎಸ್​ ಯಡಿಯೂರಪ್ಪ ತಿಳಿಸಿದರು .

ವಿಧಾನ ಸಭಾ ಚುನಾವಣೆಯಲ್ಲಿ ನಾವು 135 ಕ್ಷೇತ್ರಗಳಲ್ಲಿ ಗೆಲುವು ಪಡೆಯಬೇಕಿತ್ತು. ವಿವಿಧ ಕಾರಣದಿಂದ ಬಹಳ ಕಡಿಮೆ ಅಂತರದಲ್ಲಿ 30ಕ್ಕೂ ಅಧಿಕ ಕ್ಷೇತ್ರದಲ್ಲಿ ಸೋಲಾಯಿತು. ಬೆಂಗಳೂರಿನಲ್ಲಿ ನಮಗೆ ನಿರೀಕ್ಷಿತ ಗೆಲುವು ಸಿಕ್ಕಿಲ್ಲ ಎಂದು ತಿಳಿಸಿದರು.

ಸರ್ಕಾರಕ್ಕಿಲ್ಲ ಕಾಳಜಿ:

ದಕ್ಷಿಣ ಕರ್ನಾಟಕದಲ್ಲಿ ಉತ್ತಮ ಮಳೆ ಯಾದರೆ ಉತ್ತರ ಕರ್ನಾಟಕ ಭಾಗದಲ್ಲಿ ಶೇ. 40ರಷ್ಟು ಬರಗಾಲ ಪ್ರದೇಶವಾಗಿದೆ. ಬರಗಾಲಕ್ಕೆ ಸರ್ಕಾರ ಮತ್ತು ಅಧಿಕಾರಿಗಳು ಸ್ಪಂದಿಸುತ್ತಿಲ್ಲ.

ಬೀದರ್​​, ಕಲ್ಬುರ್ಗಿ, ರಾಯಚೂರು ಸೇರಿ 14 ಜಿಲ್ಲೆಗಳಲ್ಲಿ ಮಳೆ ಇಲ್ಲ. ಯಾವ ಒಬ್ಬ ಸಚಿವರು ಅವರಿಗೆ ಯಾವುದೇ ಭರವಸೆ ನೀಡುತ್ತಿಲ್ಲ. ಆ ಭಾಗಕ್ಕೆ ಯಾರು ಹೋಗುತ್ತಿಲ್ಲ, ಅವರ ಸಮಸ್ಯೆಯನ್ನೂ ಕೇಳುತ್ತಿಲ್ಲ. ಸಮ್ಮಿಶ್ರ ಸರ್ಕಾರ ನಡೆಸಿ ಲೋಕಸಭಾ ಚುನಾವಣೆ ಗೆಲ್ಲುವ ಹಂಬಲದಲ್ಲಿದ್ದಾರೆ

ಕಾರ್ಪೋರೇಟರ್​ಗಳ ಬಗ್ಗೆ ಬೇಸರ:

ಬಿಜೆಪಿ ಕಾರ್ಪೋರೇಟರ್ ಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರ ಅವರು , ಕಾರ್ಪೋರೇಟರ್ ಗಳು ಕೇವಲ ಶ್ರೀಂಮತ ಆಗುವುದಷ್ಟೆ ಅಲ್ಲ. ಪಕ್ಷ ಸಂಘಟನೆಗೆ ಒತ್ತು ನೀಡಬೇಕಾಗಿರುವುದು ಅವರ ಜವಾಬ್ದಾರಿ. ಕಾರ್ಪೋರೇಟರ್ ಒಳಜಗಳದಿಂದಾಗಿ ಜಯನಗರ, ರಾಜರಾಜೇಶ್ವರಿ ನಗರ ಕೈ ತಪ್ಪಿತು. ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುವಂತೆ ಸಲಹೆ ನೀಡಲು ಒಂದು ದಿನ ಅವರ ಸಭೆ ಕರೆಯುವಂತೆ ಅಶೋಕ್​ ಹಾಗೂ ಅನಂತ ಕುಮಾರ್​ಗೆ ಮನವಿ ಮಾಡಿದರು.

ಕಾಂಗ್ರೆಸ್​ಗೆ ನಾಯಕರಿಲ್ಲ

ಚುನಾವಣೆಯಲ್ಲಿ ನೇರವಾಗಿ ಸ್ಪರ್ಧೆ ಮಾಡಲು ಕಾಂಗ್ರೆಸ್​ಗೆ ತಾಕಿತ್ತಿಲ್ಲ. ಅಲ್ಲದೇ ಆ ಪಕ್ಷದಲ್ಲಿ ನಾಯಕರು ಯಾರು ಇಲ್ಲ. ಹೀಗಾಗಿ ವಾಮಮಾರ್ಗ ಮೂಲಕ ಚುನಾವಣೆ ಎದುರಿಸಲು ಕಾಂಗ್ರೆಸ್​ ಹೊರಟಿದೆ. ಕಾಂಗ್ರೆಸ್ ಗೆ ಜೀವಂತ ಮತದಾರರ ಮೇಲೆ ನಂಬಿಕೆ ಇಲ್ಲ. ಸತ್ತ ಮತದಾರರು, ಬೂತಪ್ರೇತವಾದಂತ ಮತದಾರರ ಮೇಲೆ ಕಾಂಗ್ರೆಸ್ ಅವಲಂಬಿತವಾಗಿದೆ ಈ ಹಿನ್ನಲೆ ಎನ್​ಆರ್​ಸಿ ವಿಷಯಕ್ಕೆ ಅಷ್ಟು ತಲೆ ಕೆಡಿಸಿಕೊಂಡಿದೆ ಎಂದು ಕೇಂದ್ರ ಸಚಿವ ಅನಂತ ಕುಮಾರ್​ ವ್ಯಂಗ್ಯವಾಡಿದರು.

Comments are closed.