ರಾಷ್ಟ್ರೀಯ

ಬಿಹಾರ:ಪುನರ್‌ವಸತಿ ಕೇಂದ್ರದಲ್ಲಿ ಇಬ್ಬರು ಬಾಲಕಿಯರ ಸಾವು;ರೇಪ್‌ ಶಂಕೆ

Pinterest LinkedIn Tumblr


ಪಾಟ್ನಾ: ಮುಜಾಫರ್ ಪುರ್ ಪುನರ್ವಸತಿ ಕೇಂದ್ರಗಳಲ್ಲಿ ಬಾಲಕಿಯರ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಕುರಿತು ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಪಾಟ್ನಾದ ರಾಜೀವ್‌ನಗರ ಇನ್ನೊಂದು ಪುನರ್‌ವಸತಿ ಕೇಂದ್ರ ಇಬ್ಬರು ಬಾಲಕಿಯರು ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ.

ಆಸರೆ ವಸತಿ ಗೃಹದಲ್ಲಿದ್ದ ಇಬ್ಬರು ಬಾಲಕಿಯರನ್ನು ಚಿಕಿತ್ಸೆಗಾಗಿ ಪಾಟ್ನಾ ಮೆಡಿಕಲ್‌ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ವೇಳೆ ಇಬ್ಬರು ಸಾವನ್ನಪ್ಪಿದ್ದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಅವ್ಯವಸ್ಥೆಯ ಕುರಿತು ದೂರು ಕೇಳಿ ಬಂದ ಹಿನ್ನಲೆಯಲ್ಲಿ ಶುಕ್ರವಾರ ವಸತಿ ಗೃಹಕ್ಕೆ ದಾಳಿ ನಡೆಸಿದ್ದ ಅಧಿಕಾರಿಗಳು 75 ಮಂದಿ ಮಹಿಳೆಯರನ್ನು ರಕ್ಷಿಸಿದ್ದರು.

ಮುಜಾಫರ್ ಪುರ್ ಪುನರ್ವಸತಿ ಕೇಂದ್ರದಲ್ಲಿನ ಸುಮಾರು 30ಕ್ಕೂ ಅಧಿಕ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಪ್ರಕರಣ ದ ಸಿಬಿಐ ತನಿಖೆಯೂ ನಡೆಯುತ್ತಿದೆ.

Comments are closed.