ಕರ್ನಾಟಕ

ಬೆಂಗಳೂರಿನ ಉದ್ಯಮಿಗಳ ಕಿಡ್ನಾಪ್ ಪ್ರಕರಣಕ್ಕೆ ಹೊಸತಿರುವು!

Pinterest LinkedIn Tumblr


ಬೆಂಗಳೂರು: ಕಳೆದ ಜೂನ್‌ನಲ್ಲಿ ನಗರದಲ್ಲಿ ನಡೆದಿದ್ದ ಇಬ್ಬರು ಉದ್ಯಮಿಗಳ ಕಿಡ್ನಾಪ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಕಿಡ್ನಾಪ್ ಆಗಿದ್ದ ಇಬ್ಬರು ಉದ್ಯಮಿಗಳನ್ನು ಅಪಹರಣಕಾರರು ಹತ್ಯೆ ಮಾಡಿದ್ದರು.

ಜೂನ್ 27ರಂದು ಉದ್ಯಮಿ ಪ್ರಸಾದ್ ಬಾಬುನ್ನು ಆರ್‌ಆರ್ ನಗರದಲ್ಲಿ ಕಿಡ್ನಾಪ್ ಮಾಡಲಾಗಿತ್ತು. ಮತ್ತೊಬ್ಬ ಉದ್ಯಮಿ ಬಾಲಾಜಿಯನ್ನು ಗಿರಿನಗರ ಠಾಣಾ ವ್ಯಾಪ್ತಿಯಲ್ಲಿ ಕಿಡ್ನಾಪ್ ಮಾಡಲಾಗಿತ್ತು. ಇಬ್ಬರು ಉದ್ಯಮಿಗಳನ್ನು ಒಂದೇ ಗ್ಯಾಂಗ್ ಕಿಡ್ನಾಪ್ ಮಾಡಿತ್ತು. ಸುಪಾರಿ ಪಡೆದು ಕಿಡ್ನಾಪ್ ಮಾಡಿದ್ದ ಗ್ಯಾಂಗ್ ನಂತರ ಇಬ್ಬರನ್ನು ಕೂಡ ಹತ್ಯೆ ಮಾಡಿದ್ದರು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಜಯನಗರ ಎಸಿಪಿ ನೇತೃತ್ವದಲ್ಲಿ ಕೊಲೆ ಮಾಡಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ತೇಜಸ್, ಮಣಿ ಹಾಗೂ ಅನಿಲ್ ಬಂಧಿತರು. ಮೂವರು ಆರೋಪಿಗಳನ್ನು ಬಂಧಿಸಿದ ಜಯನಗರ ಎಸಿಪಿ ಸ್ಕ್ವಾಡ್ ನಂತರ ಆರೋಪಿಗಳನ್ನು ಗಿರಿನಗರ ಪೊಲೀಸ್ ಠಾಣೆಗೆ ಕರೆದೊಯ್ದು ದಕ್ಷಿಣ ವಿಭಾಗದ ಡಿಸಿಪಿ ಶರಣಪ್ಪ ನೇತೃತ್ವದಲ್ಲಿ ವಿಚಾರಣೆ ನಡೆಸಿದ್ದಾರೆ.

Comments are closed.