ಕರ್ನಾಟಕ

ಕುಮಾರಸ್ವಾಮಿ ಕಣ್ಣನ್ನು ಒರೆಸಿಕೊಳ್ಳುತ್ತಿದ್ದ ಕರ್ಚೀಫ್​ನಲ್ಲಿ ಕಣ್ಣೀರು ಬರಿಸುವ ವಸ್ತುಗಳಿತ್ತೋ ಏನೋ: ಸದಾನಂದಗೌಡ ವ್ಯಂಗ್ಯ

Pinterest LinkedIn Tumblr

ಬೆಂಗಳೂರು: ಅಳುವುದಕ್ಕೂ ಒಂದು ಮಿತಿಯಿದೆ. 2-3 ಕರ್ಚೀಫ್​ ಒದ್ದೆಯಾಗುವವರೆಗೂ ಯಾರಾದ್ರೂ ಕಣ್ಣೀರು ಹಾಕುತ್ತಾರಾ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಗ್ಗ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ನಡೆಯುತ್ತಿರುವ ಬಿಜೆಪಿ ನಗರ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿರುವ ಸದಾನಂದಗೌಡರು, ಸಿಎಂ ಕುಮಾರಸ್ವಾಮಿಯವರಿಗೆ ರಾಜ್ಯದ ಅಭಿವೃದ್ಧಿಯಲ್ಲಿ ಯಾವ ಆಸಕ್ತಿಯೂ ಇಲ್ಲ ಎಂದು ಟೀಕಿಸಿದ್ದಾರೆ.

ಕುಮಾರಸ್ವಾಮಿ ಅವರು ಕಣ್ಣನ್ನು ಒರೆಸಿಕೊಳ್ಳುತ್ತಿದ್ದ ಕರ್ಚೀಫ್​ನಲ್ಲಿ ಕಣ್ಣೀರು ಬರಿಸುವ ವಸ್ತುಗಳಿತ್ತೋ ಏನೋ ಗೊತ್ತಿಲ್ಲ ಎಂದು ಕಾಲೆಳೆದಿದ್ದಾರೆ.

ಮುದ್ರಣ ಮತ್ತು ಎಲೆಕ್ಟ್ರಾನಿಕ್​ ಮಾಧ್ಯಮಗಳಲ್ಲಿ ಮಸಾಲೆ ಸುದ್ದಿಗಳು ಬರುತ್ತಿವೆ. ಇಂಥ ಮಾಧ್ಯಮಗಳು ನಮಗೆ ಬೇಕಾಗಿಲ್ಲ. ನಮ್ಮ ಪಕ್ಷದ ಕಾರ್ಯಕರ್ತರೇ ನಮಗೆ ಮೀಡಿಯಾಗಳು. ಕಾರ್ಯಕರ್ತರ ಎದುರು ಮತ್ತೊಂದು ಮೀಡಿಯಾ ಬೇಕಾಗಿಲ್ಲ ಎಂದಿದ್ದಾರೆ.

Comments are closed.