ಕರ್ನಾಟಕ

ನಟ ದರ್ಶನ್ ರಿಂದ ಸಾಕು ಮಗನ ಭೇಟಿ!

Pinterest LinkedIn Tumblr


ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರಿನಲ್ಲಿರುವ ತಮ್ಮ ಸಾಕು ಮಗನನ್ನ ಭೇಟಿ ಮಾಡಿದ್ದಾರೆ.

ಸಾಕು ಮಗ ಅಂದರೆ ದರ್ಶನ್ ದತ್ತು ಪಡೆದಿರುವ ಹುಲಿ. ಸುಮಾರು ಆರೇಳು ವರ್ಷದಿಂದ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ದರ್ಶನ್ ಹುಲಿಯನ್ನ ದತ್ತು ಪಡೆದಿದ್ದಾರೆ. ಮಗ ವಿನೀಶ್ ಜೊತೆ ಮೃಗಾಲಯಕ್ಕೆ ತೆರಳಿರುವ ದರ್ಶನ್ ಹುಲಿಯನ್ನ ಪ್ರೀತಿಯಿಂದ ಮಾತನಾಡಿಸಿದ್ದಾರೆ.

ತಮ್ಮ ಮಗನ ಬಳಿ ನಿನಗಿಂತ ನಾಲ್ಕು ವರ್ಷ ಚಿಕ್ಕವನು ಇವನು ಎಂದು ಹೇಳುತ್ತಾ ಹುಲಿಯನ್ನ ನೋಡ್ತಾ ಸ್ವಲ್ಪ ಸಮಯ ಮೃಗಾಲಯದಲ್ಲೇ ಕಾಲ ಕಳೆದಿದ್ದಾರೆ. ವಿಶ್ವ ಹುಲಿ ದಿನಾಚರಣೆ ಪ್ರಯುಕ್ತ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದರ್ಶನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ಕಾಡು ಉಳಿಸಿದರೆ ನಾಡು ಸುರಕ್ಷಿತವಾಗಿರಲಿದೆ. ಇತ್ತೀಚಿನ ವರ್ಷಗಳಲ್ಲಿ ಗುಬ್ಬಚ್ಚಿಗಳು ಕಾಣಿಸುತ್ತಿಲ್ಲ ಅತಿಯಾದ ಮೊಬೈಲ್ ವಿಕಿರಣದಿಂದ ಹೀಗಾಗಿದೆ ಎಂದು ವಿಶ್ಲೇಷಿಸಿದರು. ಮನೆಯಲ್ಲಿ ಪ್ರಾಣಿಗಳನ್ನು ಸಾಕಿದ ಮಾತ್ರ ಪ್ರಾಣಿ ಪ್ರಿಯರಾಗುವುದಿಲ್ಲ. ಪ್ಲಾಸ್ಟಿಕ್ ಮುಕ್ತ ಮಾಡಿ ಪರಿಸರ ಉಳಿಸಿ. ವನ್ಯ ಜೀವಿಗಳ ಸಂತತಿ ದಿನೇ ದಿನೇ ನಶಿಸುತ್ತಿದೆ. ಡೈನೋಸಾರ್ ಗಳು ಇದ್ದ ಬಗ್ಗೆ ನಾವೀಗ ಅಂತೆ ಕಂತೆಗಳನ್ನು ಕೇಳುತ್ತಿದ್ದೇವೆ. ಮುಂದಿನ ಕನಿಷ್ಠ 50 ವರ್ಷಗಳಲ್ಲಿ ಹುಲಿ, ಸಿಂಹ ಇತ್ತಂತೆ ಎಂದು ಹೇಳುವ ಪರಿಸ್ಥಿತಿ ಬರಲಿದೆ ಎಂದು ದರ್ಶನ್ ಕಳವಳ ವ್ಯಕ್ತಪಡಿಸಿದ್ದರು.

Comments are closed.