ಕರ್ನಾಟಕ

ಯುವತಿಯನ್ನು ಮದುವೆಯಾಗುವುದಾಗಿ ಲಂಡನ್​ಗೆ ಕರೆಸಿಕೊಂಡ….

Pinterest LinkedIn Tumblr


ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಲಂಡನ್​ಗೆ ಕರೆಯಿಸಿಕೊಂಡು ಯುವತಿಯನ್ನು ವಂಚಿಸಿರುವ ಪ್ರಕರಣ ಭಾನುವಾರ ಬೆಳಕಿಗೆ ಬಂದಿದೆ.

ಸಂಜಯ್​ ಮತ್ತು ಸಂತ್ರಸ್ತ ಯುವತಿ ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರ ಸಂಜಯ್​ ಮನೆಗೆ ಗೊತ್ತಾಗಿ ಆತನ ಪಾಲಕರು ಯುವತಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಮಧ್ಯೆ ಸಂಜಯ್​ ವ್ಯಾಸಾಂಗಕ್ಕೆಂದು ಲಂಡನ್​ಗೆ ತೆರಳಿದ್ದ. ನಂತರ ಯುವತಿಯನ್ನು ನಾವಿಬ್ಬರು ಮೇ ತಿಂಗಳಿನಲ್ಲಿ ಮದುವೆಯಾಗೋಣ ಎಂದು ಲಂಡನ್​ಗೆ ಕರೆಸಿಕೊಂಡಿದ್ದ.

ಸಂಜಯ್​ ಮಾತಿಗೆ ನಂಬಿ ಲಂಡನ್​ಗೆ ತೆರಳಿದ್ದ ಯುವತಿ ಆತನ ಜತೆ ಇದ್ದುಕೊಂಡೆ ವಿದ್ಯಾಭ್ಯಾಸ ಮುಂದುವರಿಸಿದ್ದಳು. ಇಬ್ಬರು ಒಂದೇ ರೂಮಿನಲ್ಲಿ ಲಿವಿಂಗ್​ ಟುಗೆದರ್​ ಸಂಬಂಧದಲ್ಲಿದ್ದರು. ಈ ವಿಚಾರ ತಿಳಿದ ಸಂಜಯ್​ ತಾಯಿ ತನಗೆ ಎದೆ ನೋವು ಎಂದು ಹೇಳಿ ಮಗನನ್ನು ಬೆಂಗಳೂರಿಗೆ ವಾಪಸ್ಸು ಕರೆಸಿಕೊಂಡಿದ್ದರು.

ಸಂಜಯ್​ ಬೆಂಗಳೂರಿಗೆ ಬರುತ್ತಿದ್ದಂತೆ ಆತನ ಪಾಲಕರು ಯುವತಿಯ ಪಾಲಕರಿಗೆ ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿತ್ತು. ಈ ವಿಷಯ ತಿಳಿದ ಯುವತಿ ತಕ್ಷಣ ಲಂಡನ್​ನಿಂದ ವಾಪಸ್ಸಾಗಿ, ಮನೆಯವರಿಗೆ ಎಲ್ಲಾ ವಿಚಾರ ತಿಳಿಸಿದ್ದಳು. ಇತ್ತ ಸಂಜಯ್​ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಲೈಂಗಿಕವಾಗಿ ನನ್ನ ಬಳಸಿಕೊಂಡು ವಂಚಿಸಿರುವುದಾಗಿ ಠಾಣೆಗೆ ದೂರು ನೀಡುವುದಾಗಿ ಆತನಿಗೆ ಹೇಳಿದ್ದಳು.

ದೂರಿನ ವಿಷಯ ತಿಳಿಯುತ್ತಿದ್ದಂತೆ ಆತಂಕಗೊಂಡ ಸಂಜಯ್​ ಮತ್ತೆ ಲಂಡನ್​ಗೆ ಪರಾರಿಯಾಗಿದ್ದಾನೆ. ಇತ್ತ ರಾಮಮೂರ್ತಿನಗರ ಪೊಲೀಸರು ವಂಚನೆ ಪ್ರಕರಣ ಸ್ವೀಕರಿಸದೇ, ಯುವತಿಯ ಪೋಷಕರಿಗೆ ಸಂಜಯ್ ಪೋಷಕರು ಒಡ್ಡಿದ್ದ ಜೀವ ಬೆದರಿಕೆ ಪ್ರಕರಣ ಮಾತ್ರ ಸ್ವೀಕರಿಸಿದ್ದಾರೆ.

ಯುವತಿ ಮಹಿಳಾ ಆಯೋಗಕ್ಕೆ ದೂರು ನೀಡಿ ಮತ್ತೆ ಪರೀಕ್ಷೆ ಬರೆಯಲು ಲಂಡನ್​ಗೆ ತೆರಳಿದ್ದ ವೇಳೆ ಸಂಜಯ್​ ಆಕೆಯ ರೂಮ್​ಗೆ ಬಂದು ಮೊಬೈಲ್ ಒಡೆದು ಹಲ್ಲೆ ಮಾಡಿದ್ದ. ಈ ಕುರಿತು ಲಂಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಸಂಜಯ್​ನನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಸದ್ಯ ಲಂಡನ್​ನಿಂದ ಬೆಂಗಳೂರಿಗೆ ಬಂದಿರುವ ಯುವತಿ, ತನಗೆ ನ್ಯಾಯ ಬೇಕೆಂದು ಮಾಧ್ಯಮದ ಮುಂದೆ ಬಂದಿದ್ದಾಳೆ.

Comments are closed.