ಕರ್ನಾಟಕ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅದ ಗೋಡೆಯ ಮೇಲೆ ಸಾಯಿಬಾಬಾ ಪ್ರತ್ಯಕ್ಷ!

Pinterest LinkedIn Tumblr


ಬಳ್ಳಾರಿ: ಸದಾ ಒಂದಲ್ಲ ಒಂದು ಪವಾಡಗಳಿಂದಲೇ ಶ್ರೀ ಸಾಯಿಬಾಬಾ ಸಾಕಷ್ಟು ಹೆಸರುವಾಸಿಯಾದವರು. ದೇವ ಶ್ರೀ ಸಾಯಿಬಾಬಾ ಎಲ್ಲಿರುತ್ತಾನೋ ಅಲ್ಲಿ ಪವಾಡವಿದೆ. ಕಲಿಯುಗದಲ್ಲಿಯೂ ಬಾಬಾ ಪವಾಡ ಮುಂದುವರೆಯುತ್ತಿವೆ. ಗಣಿನಾಡು ಬಳ್ಳಾರಿಯಲ್ಲಿಯೂ ಬಾಬಾ ಮತ್ತೆ ಸುದ್ದಿಯಲ್ಲಿದ್ದಾರೆ. ಗುರು ಪೌರ್ಣಮಿಯ ಹತ್ತಿರ ಬರುತ್ತಿದ್ದಂತೆ ಈ ಬಾರಿಯ ದೇವಸ್ಥಾನದ ಗೋಡೆಯ ಬಾಬಾ ಕಾಣಿಸುತ್ತಿದ್ದಾರಂತೆ! ಏನದು ಬಾಬಾ ಗೋಡೆ ಪವಾಡ ಅಂತೀರಾ? ಇಲ್ಲಿದೆ ವಿವರ

ಬಾಬಾ ಮೂರ್ತಿ ಹಾಲು ಕುಡಿಯಿತಂತೆ! ಯಾರೂ ಇಲ್ಲದೇ ಹೋದರೆ ಆರತಿ ಬೆಳಗುತ್ತಂತೆ! ದೇವಸ್ಥಾನದಲ್ಲಿ ಬಾಬಾ ಆಕೃತಿ ಕಾಣಿಸುತ್ತಂತೆ! ಹೀಗೆ ಶ್ರೀ ಸತ್ಯಸಾಯಿ ಬಾಬಾ ಕುರಿತು ಪವಾಡಗಳು ಒಂದಾ, ಎರಡಾ! ಈ ಎಲ್ಲ ಕಾರಣಕ್ಕೆ ಮಾಧ್ಯಮಗಳಲ್ಲಿ ಬಾಬಾ ಅತಿ ಹೆಚ್ಚು ಸುದ್ದಿಯೂ ಆಗಿದ್ದಾರೆ. ಇದೀಗ ಗಣಿನಾಡು ಬಳ್ಳಾರಿಯಲ್ಲಿ ಸಾಯಿ ಬಾಬಾ ಮತ್ತೊಂದು ಸುದ್ದಿಯಲ್ಲಿದ್ದಾರೆ. ನಗರದ ಎಂಜಿ ರಸ್ತೆಯ ಹಿಂಭಾಗವಿರುವ ವಿಶಾಲ ನಗರದಲ್ಲಿರುವ ಶ್ರೀ ಶಿರಿಡಿ ಸಾಯಿಬಾಬಾ ಮಂದಿರದಲ್ಲಿ ಬಾಬಾ ಆಕೃತಿ ಕಾಣುತ್ತಿದೆ. ಬಾಬಾ ಮೂರ್ತಿಯ ಹಿಂಬಾಗದ ಗೋಡೆಯ ಮೇಲೆ ಅಸ್ಪಷ್ಟವಾಗಿ ಬಾಬಾ ಹೋಲುವ ಆಕೃತಿ ಕಾಣುತ್ತಿದೆ. ಫೋಟೋದಲ್ಲಿ ಮಾತ್ರ ಸಾಯಿಬಾಬಾ ಹೋಲುವ ಆಕೃತಿ ಸ್ಪಷ್ಟವಾಗಿ ಕಾಣುತ್ತಿದೆ. ಆ ದೇವಸ್ಥಾನದ ಸ್ವಾಮೀಜಿ ನಟರಾಜ್ ಸಾಯಿಬಾಬಾ ಆಕೃತಿ ಇರುವ ಗೋಡೆ ತೋರಿಸುವ ಹಾಗೂ ಗೋಡೆಯಲ್ಲಿ ಕಾಣುತ್ತಿರುವ ಬಾಬಾ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಕೆಲ ದಿನಗಳ ಹಿಂದೆ ದೇವಸ್ಥಾನ ಸ್ವಚ್ಚಗೊಳಿಸುವ ಸಂದರ್ಭದಲ್ಲಿ ಬಾಬಾ ಆಕೃತಿ ರೀತಿ ಕಾಣಿಸಿದೆ. ಇದನ್ನು ಗಮನಿಸಿದ ಭಕ್ತರು ಫೋಟೋ ತೆಗೆದಿದ್ದಾರೆ. ಅದು ವೈರಲ್ ಆಗಿದೆ. ಇದೆಲ್ಲ ಸಾಯಿಬಾಬಾ ಪವಾಡವೆನ್ನುತ್ತಾರೆ ದೇವಸ್ಥಾನದ ಅರ್ಚಕ ನಟರಾಜ್.

ಯಾವಾಗ ಸಾಮಾಜಿಕ ಜಾಲತಾಣದಲ್ಲಿ ದೇವಸ್ಥಾನದ ಗೋಡೆಯ ಮೇಲೆ ಬಾಬಾ ಚಿತ್ರ ವೈರಲ್ ಆಯಿತೋ ಭಕ್ತರು ದೇವಸ್ಥಾನಕ್ಕೆ ಬರುವವರ ಸಂಖ್ಯೆಯಲ್ಲಿಯೂ ಹೆಚ್ಚಾಗಿದಂತೆ. ಪ್ರತಿ ಗುರುವಾರ ಬಾಬಾ ಭಕ್ತರ ಸಂಖ್ಯೆ ಹತ್ತು ಸಾವಿರ ಮೀರುತ್ತಿದೆ. ಇದೀಗ ಗೋಡೆಯ ಮೇಲೆ ಕಾಣಿಸುವ ಬಾಬಾ ಆಕೃತಿ ನೋಡಲು ಭಕ್ತರ ದಂಡೇ ಬರುತ್ತಿದೆ. ಮೊಬೈಲ್ ನಲ್ಲಿ ಕಂಡಷ್ಟು ಸ್ಪಷ್ಟವಾಗಿ ಗೋಡೆಯ ಮೇಲೆ ಬಾಬಾ ಆಕೃತಿ ಕಾಣಿಸುತ್ತಿಲ್ಲ. ಆದರೆ ಗೋಡೆಯ ಮೇಲೆ ಅಸ್ಪಷ್ಟವಾದ ಆಕೃತಿ, ದಿಟ್ಟಿಸಿ ನೋಡಿದರೆ ಬಾಬಾ ಕಂಡಂತೆ ಕಾಣುತ್ತಿದೆ, ಭಾಸವಾಗುತ್ತಿದೆ. ಒಂದೆರಡು ಕೋನದಲ್ಲಿ ಬಾಬಾ ಆಕೃತಿ ಗೋಡೆಯ ಮೇಲೆ ಸ್ವಲ್ಪಮಟ್ಟಿಗೆ ಕಾಣಿಸುತ್ತಿದೆ. ಮನಸಿನಲ್ಲಿ ಬಾಬಾನನ್ನು ನೆನಸಿಕೊಂಡು ನೋಡಿದರೆ ಖಂಡಿತವಾಗಿಯೂ ಕಾಣಿಸುತ್ತದೆ. ಕಳೆದೊಂದು ವರುಷದಿಂದ ದೇವಸ್ಥಾನಕ್ಕೆ ಬರುತ್ತಿದ್ದೇನೆ. ಗೋಡೆಯ ಮೇಲೆ ಬಾಬಾ ಆಕೃತಿ ಕಾಣಿಸುವುದು ಗೊತ್ತಿದ್ದಿಲ್ಲ. ಸ್ಥಳೀಯರು ಹೇಳಿದ ಮೇಲೆ ನೋಡಿದರೆ ನನಗೆ ಸಾಯಿಬಾಬಾ ಮುಖ ಗೋಡೆಯ ಮೇಲೆ ಕಾಣಿಸುತ್ತಿದೆ ಎಂದು ಭಕ್ತರಾದ ಶ್ರಾವಣಿ, ನೇತ್ರಾ ಅಭಿಪ್ರಾಯಪಡುತ್ತಾರೆ.

ಕಳೆದೊಂದು ದಶಕದ ಹಿಂದೆ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಟ್ರಸ್ಟರ್ ಮೂಲಕ ನಿರ್ಮಾಣವಾದ ಶಿರಿಡಿ ಸಾಯಿಬಾಬಾ ಮಂದಿರ ಈಗಾಗಲೇ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ನೆರೆಯ ಆಂಧ್ರ, ತೆಲಂಗಾಣ ಸೇರಿದಂತೆ ರಾಜ್ಯದ ಹಲವು ಭಾಗಗಳಿಂದಲೂ ಬಳ್ಳಾರಿಯ ಸಾಯಿ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಪ್ರತಿ ವರುಷವೂ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಗುರುಪೌರ್ಣಮಿ ಹಿನ್ನೆಲೆ ಮೂರು ದಿನಗಳ ರಕ್ತದಾನ, ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ. ಗುರುಪೌರ್ಣಮಿ ಸಂದರ್ಭದಲ್ಲಿಯೇ ಸಾಯಿಬಾಬಾ ಗೋಡೆಯ ಮೇಲೆ ಕಾಣಿಸಿರುವುದು ಪವಾಡವೆಂದು ಭಕ್ತರು ಎಂದುಕೊಂಡರೆ, ಇದೆಲ್ಲ ಗ್ರಾಫಿಕ್ಸ್ ಇರಬಹುದು ಎಂದು ಪ್ರಜ್ಞಾವಂತರು ಅಂದುಕೊಳ್ಳುತ್ತಿದ್ದಾರೆ.

Comments are closed.