ಕರ್ನಾಟಕ

4 ಕಂತುಗಳಲ್ಲಿ ರೈತರ 48 ಸಾವಿರ ಕೋಟಿ ರು. ಸಾಲ ಮನ್ನಾ: ಮುಖ್ಯಮಂತ್ರಿ ಕುಮಾರ ಸ್ವಾಮಿ

Pinterest LinkedIn Tumblr

ಬೆಂಗಳೂರು: ರೈತರ ಭಾಗಶಃ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಘೋಷಿಸಿ ಮೂರು ವಾರ ಕಳೆದಿದೆ. ರಾಷ್ಟ್ರೀಕೃತ ಮತ್ತು ವಾಣಿಜ್ಯ ಬ್ಯಾಂಕ್ ಗಳು ಸಾಲ ಮನ್ನಾ ಪ್ರಕ್ರಿಯೆಗೆ ಅನುಮೋದನೆ ನೀಡಿವೆ. ಮಂಗಳವಾರ ನಡೆದ ರಾಜ್ಯ ಮಟ್ಟದ ಬ್ಯಾಂಕರ್ಸ್ ಸಭೆಯಲ್ಲಿ 4 ಕಂತುಗಳಲ್ಲಿ ಸಾಲಮನ್ನಾ ಪ್ರಕ್ರಿಯೆಗೆ ಬ್ಯಾಂಕ್ ಗಳು ಸಮ್ಮತಿಸಿವೆ.

ಬ್ಯಾಂಕರ್ ಗಳ ಎರಡು ಉಪ ಸಮಿತಿ ಮತ್ತು ಸರ್ಕಾರದ ಪ್ರತಿನಿಧಿಗಳ ಸಮಿತಿ ರಚನೆಯಾಗಿದ್ದು,ಒಡಂಬಡಿಕೆ ಹಾಗೂ ಒಪ್ಪಂದಗಳ ಆಧಾರದ ಮೇಲೆ ಕೆಲಸ ಮಾಡಲಿವೆ,

ಸರ್ಕಾರ ಪೂರ್ಣ ಪ್ರಮಾಣದಲ್ಲಿ ಭರವಸೆ ನೀಡಿದರೆ ಮಾತ್ರ 4 ಕಂತುಗಳಲ್ಲಿ ಸಾಲ ಮನ್ನಾ ಪ್ರಕ್ರಿಯೆಗೆ ಬ್ಯಾಂಕ್ ಗಳು ಸಮ್ಮತಿಸುವುದಾಗಿ ಹೇಳಿವೆ, ಮೊದಲ ಉಪ ಸಮಿತಿ ನಿರ್ಧಾರ ಅನುಸರಿಸಿ ಉಳಿದ ಎಲ್ಲಾ 15 ಸದಸ್ಯರ ಸಮಿತಿ ಅನುಷ್ಠಾನಕ್ಕೆ ತರಲಿದೆ, ಮಾಹಿತಿ ಸಂಗ್ರಹಣೆ ಜವಾಬ್ದಾರಿ ಈ ಸಮಿತಿಯದ್ದಾಗಿರುತ್ತದೆ, ಅಂದಾಜು ವೆಚ್ಚ, ಒಟ್ಟು ಸಾಲದ ಮೊತ್ತ, ನಕಲಿ ಸಾಲದ ಖಾತೆ, ನಕಲಿ ಘೋಷಣೆ, ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ ಲೋನ್ ವೇವರ್ ಎಂಬ ಸಾಫ್ಟ್ ವೇರ್ ನಲ್ಲಿ ದಾಖಲಿಸಬೇಕಾಗಿದೆ, ಇದನ್ನಲ್ಲಾ ಸಂಗ್ರಹಿಸಲು ಸುಮಾರು 45 ದಿನಗಳ ಕಾಲ ಬೇಕಿದೆ.

ಸಾಲ ಮನ್ನಾ ಕುರಿತು ಮುಖ್ಯ ಕಾರ್ಯದರ್ಶಿಗಳು ಹಾಗೂ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರರ ನೇತೃತ್ವದಲ್ಲಿ ಹಣಕಾಸು ಇಲಾಖೆ ಅಧಿಕಾರಿಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಾಲಮನ್ನಾ ಯೋಜನೆಯನ್ನು ಸುಲಲಿತವಾಗಿ ಅನುಷ್ಠಾನಗೊಳಿಸಲು ಹಾಗೂ ರೈತರಿಗೆ ಹೊಸ ಬೆಳೆ ಸಾಲ ನೀಡಲು ಅನುಕೂಲ ಕಲ್ಪಿಸುವ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಸಹಕಾರ ನೀಡುವ ಕುರಿತು ಸಕಾರಾತ್ಮಕ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಿಎಂ ತಿಳಿಸಿದರು.

ಈ ಕುರಿತು ರಾಷ್ಟ್ರೀಕೃತ ಬ್ಯಾಂಕಿನ ಅಧಿಕಾರಿಗಳು ಒಪ್ಪಿಗೆ ಕೊಟ್ಟಿದ್ದು, ಕೇಂದ್ರ ಕಚೇರಿ ಅಧಿಕಾರಿಗಳ ಜತೆ ಚರ್ಚಿಸಿ, ನಿರ್ದೇಶಕ ಮಂಡಳಿ ಅನುಮೋದನೆ ಪಡೆಯುವುದಾಗಿ ತಿಳಿಸಿದ್ದಾರೆ. ಬ್ಯಾಂಕುಗಳು ಅರ್ಹ ಸಾಲಗಳ ಅಂಕಿ ಅಂಶಗಳನ್ನು ನಿಗದಿತ ನಮೂನೆಯಲ್ಲಿ ಡಿಜಿಟಲ್ ಸಹಿಯೊಂದಿಗೆ ಸರ್ಕಾರಕ್ಕೆ ಸಲ್ಲಿಸಬೇಕು.

ಅದನ್ನು ಪರಿಶೀಲಿಸಿ ಸಾಲ ಮನ್ನಾ ಮಾಡಲು ರೂಪು ರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ. 37,159 ಕೋಟಿ ರೂ. ರಾಷ್ಟ್ರೀಕೃತ ಬ್ಯಾಂಕುಗಳ ಬೆಳೆ ಸಾಲ, 9448 ಕೋಟಿ ರೂ. ಹೊಸಚಾಲ್ತಿ ಸಾಲ ಎಲ್ಲ ಸೇರಿ ಸುಮಾರು 48 ಸಾವಿರ ಕೋಟಿ ರೂ. ಗಳಷ್ಟಾಗುತ್ತವೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

Comments are closed.