ಕರ್ನಾಟಕ

ನಟ ದರ್ಶನ್​ ಪರಮಾಪ್ತ ಮಲ್ಲಿಕಾರ್ಜುನ್​ನಿಂದ ಅರ್ಜುನ್ ಸರ್ಜಾಗೆ ಪ್ರೇಮಬರಹ ಚಲನಚಿತ್ರ ವಿತರಣೆ ಮಾಡಿ ನಯಾಪೈಸೆ ನೀಡದೆ ನಾಪತ್ತೆ

Pinterest LinkedIn Tumblr


ಬೆಂಗಳೂರು: ನಟ ಅರ್ಜುನ್​ ಸರ್ಜಾ ತಮ್ಮ ನಿರ್ದೇಶನದ ಪ್ರೇಮಬರಹ ಚಲನಚಿತ್ರ ವಿತರಕ ಮಲ್ಲಿಕಾರ್ಜುನ್​ನಿಂದ ಕೋಟಿಕೋಟಿ ರೂಪಾಯಿ ವಂಚನೆಗೆ ಒಳಗಾಗಿದ್ದಾರೆ.

ಮಲ್ಲಿಕಾರ್ಜುನ್​ ನಟ ದರ್ಶನ್​ಗೆ ಪರಮಾಪ್ತ. ಈತ ಪ್ರೇಮಬರಹ ಚಿತ್ರದ ವಿತರಣೆ ಹೊಣೆ ಹೊತ್ತಿದ್ದ. ಆದರೆ ಅದರಿಂದ ಬಂದ ದುಡ್ಡನ್ನು ಅರ್ಜುನ್ ಸರ್ಜಾಗೆ ನೀಡದೆ ನಾಪತ್ತೆಯಾಗಿದ್ದಾರೆ. ಫೋನ್​ಗೂ ಸಿಗುತ್ತಿಲ್ಲ. ದರ್ಶನ್​ ಹಾಗೂ ಅರ್ಜುನ್​ ಸರ್ಜಾ ಇಬ್ಬರೂ ಹತ್ತಿರದ ಒಡನಾಡಿಗಾಳಿದ್ದಾರೆ. ಇದೇ ಕಾರಣಕ್ಕೆ ಅರ್ಜುನ್​ ಸರ್ಜಾ ಇನ್ನೂ ಯಾವುದೇ ಕಾನೂನು ಕ್ರಮಕ್ಕೆ ಮುಂದಾಗಿಲ್ಲ ಎನ್ನಲಾಗಿದೆ.

ಈ ಬಗ್ಗೆ ದಿಗ್ವಿಜಯ ನ್ಯೂಸ್ ಜತೆ ಮಾತನಾಡಿರು ಅರ್ಜುನ್​ ಸರ್ಜಾ, ನಂಬಿಕೆಯಿಂದ ಕೊಟ್ಟರೆ ಹೇಳದೆ ಕೇಳದೆ ನಾಪತ್ತೆಯಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮಲ್ಲಿಕಾರ್ಜುನ್​ ದರ್ಶನ್​ ಅವರ ಆಪ್ತರಾಗಿದ್ದು ತೂಗುದೀಪ್​ ಡಿಸ್ಟ್ರಿಬ್ಯೂಷನ್​ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಅಲ್ಲದೆ ಅವರಿಗೆ ಅನುಕೂಲವಾಗಲಿ ಎಂದು ದರ್ಶನ್​ ಹೋಟೆಲ್​ ಇಟ್ಟುಕೊಟ್ಟಿದ್ದರು. ಆದರೆ ಸಾಲ ಮಾಡಿಕೊಂಡಿದ್ದರು. ಮಲ್ಲಿಕಾರ್ಜುನ್​ ಹೆಚ್ಚು ಜನರ ಬಳಿ ಎರಡು ಲಕ್ಷ, ಮೂರು ಲಕ್ಷ ಕೈಗಡ ಪಡೆದಿದ್ದೇ ಹೆಚ್ಚು. ಕೊಟ್ಟವರೆಲ್ಲ ದರ್ಶನ್​ ಮ್ಯಾನೇಜರ್​ ಎಂಬ ನಂಬಿಕೆಯಿಂದಲೇ ಕೊಟ್ಟಿದ್ದರು. ಆದರೆ ಈಗ ಹಿರಿಯ ನಟ ಅರ್ಜುನ್​ ಸರ್ಜಾಗೂ ವಿತರಣೆಯ ಹಣ ನೀಡದೆ ನಾಪತ್ತೆಯಾಗಿದ್ದಾರೆ.

Comments are closed.