ಕರ್ನಾಟಕ

ರಾಷ್ಟ್ರಮಟ್ಟದ ಸ್ಪರ್ಧೆಗೆ ರಾಜ್ಯದ ಎರಡು ಬೆಕ್ಕು

Pinterest LinkedIn Tumblr

ಬೆಂಗಳೂರು: ಅಪಾಯಕಾರಿ ಸನ್ನಿವೇಶದಲ್ಲಿ ಗಾಯಗೊಂಡ, ಅನಾರೋಗ್ಯಕ್ಕೆ ತುತ್ತಾಗಿ ಶುಶ್ರೂಷೆ, ಪಾಲನೆ ಬಳಿಕ ಚೇತರಿಸಿಕೊಂಡ ರಾಜ್ಯದ ಎರಡು ಸಂರಕ್ಷಿತ ಬೆಕ್ಕುಗಳು ಇದೀಗ ರಾಷ್ಟ್ರ ಮಟ್ಟದ ಸ್ಪರ್ಧೆಯೊಂದರ ಅಂತಿಮ ಸುತ್ತಿಗೆ ಆಯ್ಕೆಯಾಗಿವೆ.

ಪೀಪಲ್‌ ಫಾರ್‌ ದಿ ಎಥಿಕಲ್‌ ಟ್ರೀಟ್ಮೆಂಟ್‌ ಆಫ್ ಅನಿಮಲ್‌ (ಪಿಇಟಿಎ) ಸಂಸ್ಥೆಯ “ಇಂಡಿಯಾಸ್‌ ಕ್ಯೂಟೆಸ್ಟ್‌ ರೆಸ್ಕ್ಯೊವ್ಡ ಕ್ಯಾಟ್ಅ ಲೈವ್‌’ ಸ್ಪರ್ಧೆ ಅಂತಿಮ ಸುತ್ತಿಗೆ ರಾಷ್ಟ್ರಾದ್ಯಂತ 10 ಬೆಕ್ಕುಗಳು ಆಯ್ಕೆಯಾಗಿದ್ದು, ಅದರಲ್ಲಿ ರಾಜ್ಯದ ಎರಡು ಬೆಕ್ಕುಗಳು ಸೇರಿವೆ. ವಿಜಯಪುರದ ಸುಷ್ಮಿತಾ ಪಾಟೀಲ್‌ ಸಂರಕ್ಷಿಸಿರುವ “ಮಿಮಿ’ ಹಾಗೂ ಕಲಬುರಗಿಯ ರಾಧಿಕಾ ಯೆಲ್ಸಂಗೀಕರ್‌ ಪೋಷಿಸಿದ “ಚುಟ್ಕಿ’ ಬೆಕ್ಕು ಸ್ಪರ್ಧೆಯ ಅಂತಿಮ ಕಣದಲ್ಲಿವೆ.

ಮುದ್ದಾದ ಸಾಕು ಪ್ರಾಣಿಗಳನ್ನು ಮಳಿಗೆ ಇಲ್ಲವೇ ಪಾಲನಾ ಕೇಂದ್ರಗಳಿಂದ ಖರೀದಿಸುವ ಬದಲಿಗೆ ರಸ್ತೆಬದಿ ಇರುವ
ಇಲ್ಲವೇ, ನಿರಾಶ್ರಿತ ಪ್ರಾಣಿಗಳನ್ನು ದತ್ತು ಪಡೆಯುವುದನ್ನು ಉತ್ತೇಜಿಸಲು “ಪೇಟ’ ಈ ಸ್ಪರ್ಧೆ ಆಯೋಜಿಸುತ್ತಿದೆ. ಅಂತಿಮ ಸುತ್ತಿಗೆ ಆಯ್ಕೆಯಾಗಿರುವ ಬೆಕ್ಕುಗಳ ಸಂರಕ್ಷಣೆಯ ವಿವರವನ್ನು ವೆಬ್‌ಸೈಟ್‌ನಲ್ಲಿ ಪಡೆಯಬಹುದಾಗಿದ್ದು, ನಿಮ್ಮ ಇಚ್ಛೆಯ ಬೆಕ್ಕನ್ನು ಆಯ್ಕೆ ಮಾಡಲು ಜು.30ರವರೆಗೆ ಅವಕಾಶ ಕಲ್ಪಿಸಿದೆ. ವೆಬ್‌ಸೈಟ್‌ ವಿಳಾಸ: PETAIndia.com

Comments are closed.