ಕರ್ನಾಟಕ

ಹಳಿ ತಪ್ಪಿದ ನವದೆಹಲಿ ಬೆಂಗಳೂರು ಎಕ್ಸ್‌ಪ್ರೆಸ್‌

Pinterest LinkedIn Tumblr


ಕೆ.ಆರ್‌.ಪುರ: ನವದೆಹಲಿಯಿಂದ ಬೆಂಗಳೂರು ನಗರಕ್ಕೆ ಆಗಮಿಸುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್‌ ರೈಲು, ಶುಕ್ರವಾರ ಸಂಜೆ ಕೆ.ಆರ್‌.ಪುರ ರೈಲು ನಿಲ್ದಾಣದ ಬಳಿ ಹಳಿ ತಪ್ಪಿದ ಪರಿಣಾಮ ಕೆಲ ಕಾಲ ರೈಲುಗಳ ಸಂಚಾರಕ್ಕೆ ಅಡಚಣೆಯಾಗಿತ್ತು.

ಚಾಲಕನ ಸಮಯ ಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ಅನಾಹುತ ತಪ್ಪಿದ್ದು, ರೈಲು ಹಳಿ ತಪ್ಪಿದ್ದರಿಂದ ಚೆನ್ನೈಗೆ ತೆರಳಬೇಕಿದ್ದ ಹಲವು ರೈಲುಗಳ ಸಂಚಾರದಲ್ಲಿ ಕೆಲ ಗಂಟೆಗಳ ಕಾಲ ವಿಳಂಬವಾಯಿತು.

ಶುಕ್ರವಾರ ಮಧ್ಯಾಹ್ನ 1.45ಕ್ಕೆ ಬೆಂಗಳೂರು ತಲುಪಬೇಕಿದ್ದ ಕರ್ನಾಟಕ ಎಕ್ಸ್‌ಪ್ರೆಸ್‌ ರೈಲು ಕೆಲ ಕಾರಣಗಳಿಂದ ತಡವಾಗಿ ಆಗಮಿಸಿದ್ದು, ಸಂಜೆ 7 ಗಂಟೆ ವೇಳೆಗೆ ಕೆ.ಆರ್‌.ಪುರ ರೈಲು ನಿಲ್ದಾಣ ಸಮೀಪಿಸಿದೆ. ಈ ವೇಳೆ ರೈಲು ನಿಲ್ದಾಣ ಸಮೀಪದ ಕಸ್ತೂರಿ ನಗರದ ಬಳಿ ಮಾರ್ಗ ಬದಲಾಯಿಸುವ ಸಂದರ್ಭದಲ್ಲಿ ಇಂಜಿನ್‌ ಹಳಿ ತಪ್ಪಿದೆ. ಇದರಿಂದಾಗಿ ಕೆ.ಆರ್‌.ಪುರ ನಿಲ್ದಾಣ ಮಾರ್ಗವಾಗಿ ವಿವಿಧ ನಗರಗಳಿಗೆ ತೆರಳಬೇಕಿದ್ದ ಹಲವು ರೈಲುಗಳ ಸಾವಿರಾರು ಪ್ರಯಾಣಿಕರು ಸುಮಾರು ನಾಲ್ಕು ಗಂಟೆಗಳ ಕಾಲ ಪರದಾಡುವಂತಾಯಿತು.

ವಿಷಯ ತಿಳಿದು ರೈಲ್ವೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಕರ್ನಾಟಕ ಎಕ್ಸ್‌ಪ್ರೆಸ್‌ ರೈಲಿನ ಎಂಜಿನ್‌ ಬೇರ್ಪಡಿಸಿ, ಬೋಗಿಗಳನ್ನು ಮತ್ತೂಂದು ಎಂಜಿನ್‌ಗೆ ಜೋಡಿಸಿ ಪ್ರಯಾಣಿಕರನ್ನು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಕಳಿಸಿಕೊಡಲಾಯಿತು.

Comments are closed.