ಕರ್ನಾಟಕ

ಮಾಹಿತಿ ಕದಿಯುವ ಸಾಧನವನ್ನು ಮೆಟ್ರೋ ನಿಲ್ದಾಣದಲ್ಲಿ ಅಡಗಿಸಿಟ್ಟ ಭದ್ರತಾ ಸಿಬ್ಬಂದಿ ಸೆರೆ

Pinterest LinkedIn Tumblr


ಬೆಂಗಳೂರು: ಬೆಂಗಳೂರಿನ ಇಂದಿರಾನಗರದ ಮೆಟ್ರೋ ನಿಲ್ದಾಣದಲ್ಲಿ ಬೀಕಾನ್​ ಎಂಬ ಬ್ಲೂಟೂತ್​ ಸಾಧನ ಪತ್ತೆಯಾಗಿದ್ದು, ಅದನ್ನು ಗುಟ್ಟಾಗಿ ಅಡಗಿಸಿಟ್ಟಿದ್ದ ಭದ್ರತಾ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜು.14ರ ಬೆಳಗಿನ ಜಾವ 5 ಗಂಟೆ ಸುಮಾರಿನಲ್ಲಿ ನಿಲ್ದಾಣಕ್ಕೆ ಬಂದಿದ್ದ ಭದ್ರತಾ ಸಿಬ್ಬಂದಿ ವೆನಕಂಡಿ ಸರುಣ್​ ಎಂಬಾತ ಬೀಕಾನ್​ ಬ್ಲೂಟೂತ್​ ಸಾಧನವನ್ನು ಇರಿಸಿದ್ದು ನಿಲ್ದಾಣದಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಇದನ್ನು ಮೆಟ್ರೋ ಅಧಿಕಾರಿ ಫಾರೂಕ್​ ಹುಸೇನ್​ ಎಂಬವರು ಗಮನಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಫಾರೂಕ್​ ಅವರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ಬ್ಯೂಟೂತ್​ ಸಾಧನವನ್ನು ವಶಕ್ಕೆ ಪಡೆದಿದ್ದು, ಅಡಗಿಸಿಟ್ಟಿದ್ದ ಭದ್ರತಾ ಸಿಬ್ಬಂದಿ ವೆನಕಂಡಿ ಅವರನ್ನು ಬಂಧಿಸಿದ್ದಾರೆ.

ಏನಿದು ಬೀಕಾನ್​

ಬೀಕಾನ್​ ಬ್ಲುಟೂತ್​ ಸಾಧನ ಬಳಸಿ ನಿರ್ಧಿಷ್ಟ ಅಂತರದ ಸ್ಮಾರ್ಟ್​ ಫೋನ್​ಗಳಿಗೆ ಮಾಹಿತಿ, ದತ್ತಾಂಶಗಳನ್ನು ರವಾನಿಸಬಹುದು ಅಥವಾ ಅಲ್ಲಿಂದ ಪಡೆಯಬಹುದು. ಆದರೆ, ಇದನ್ನು ಮೆಟ್ರೋ ನಿಲ್ದಾಣದಲ್ಲಿ ಅಡಗಿಸಿಟ್ಟ ಕಾರಣ ಈವರೆಗೆ ಗೊತ್ತಾಗಿಲ್ಲ. ಯಾವ ಉದ್ದೇಶಕ್ಕಾಗಿ ಈ ಸಾಧನವನ್ನು ಅಡಗಿಸಡಲಾಯಿತು ಎಂಬುದರ ಬಗ್ಗೆ ವೆನಕಂಡಿ ಬಾಯಿ ಬಿಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇಂದಿರಾ ನಗರ ಪೊಲೀಸರು ಈ ಪ್ರಕರಣವನ್ನು ಸೈಬರ್​ ಪೊಲೀಸರಿಗೆ ಒಪ್ಪಿಸಿದ್ದಾರೆ.

Comments are closed.