ಕರ್ನಾಟಕ

ಮುಂದಿನ ತಿಂಗಳಿನಿಂದ ಪ್ರತ್ಯೇಕ ಲಿಂಗಾಯಿತ ಧರ್ಮ ಹೋರಾಟ ಪುನರ್ ಆರಂಭ: ಎಂ. ಬಿ. ಪಾಟೀಲ್

Pinterest LinkedIn Tumblr

ವಿಜಯಪುರ : ಸ್ವಲ್ಪ ದಿನಗಳಿಂದ ತಣ್ಣಗಾಗಿದ್ದ ಪ್ರತ್ಯೇಕ ಲಿಂಗಾಯಿತ ಧರ್ಮ ಹೋರಾಟ ಪುನರ್ ಆರಂಭಗೊಳ್ಳಲಿದೆ ಎಂದು ಮಾಜಿ ಸಚಿವ ಎಂ. ಬಿ. ಪಾಟೀಲ್ ಹೇಳಿದ್ದಾರೆ.

ಚುನಾವಣೆ ನಂತರ ಇದೇ ಮೊದಲ ಬಾರಿಗೆ ಲಿಂಗಾಯಿತ ಹೋರಾಟ ಕುರಿತು ಮಾತನಾಡಿದ ಅವರು, ಅನೇಕ ಲಿಂಗಾಯಿತ ನಾಯಕರು ಚುನಾವಣಾ ಪ್ರಕ್ರಿಯೆ ಹಾಗೂ ಹೊಸ ಸರ್ಕಾರ ರಚನೆಯಲ್ಲಿ ನಿರತರಾಗಿದ್ದರಿಂದ ಹೋರಾಟಕ್ಕೆ ವಿರಾಮ ನೀಡಲಾಗಿದೆ. ಈ ತಿಂಗಳ ನಂತರ ಮತ್ತೆ ಹೋರಾಟ ಆರಂಭಿಸುವುದಾಗಿ ಹೇಳಿದರು.

ಜೆಡಿಎಸ್ ಪಕ್ಷದ ಬಸವರಾಜ್ ಹೊರಟ್ಟಿ ಕೂಡಾ ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಬಾರಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಂ. ಬಿ. ಪಾಟೀಲ್ ತಿಳಿಸಿದರು.

ಲಿಂಗಾಯಿತ ಸಮುದಾಯದ ಪ್ರತ್ಯೇಕ ಧರ್ಮದ ಹೋರಾಟವನ್ನು ಮತ್ತೆ ಆರಂಭಿಸುವ ಕುರಿತು ನಾಯಕರು ಹಾಗೂ ತಜ್ಞರು ಸಭೆಯನ್ನು ಆರಂಭಿಸಿದ್ದಾರೆ. ಆದರೆ, ಈ ಬಾರಿ ಹೋರಾಟದ ಸ್ವರೂಪ ಬೇರೆ ರೀತಿಯದ್ದಾಗಿರುತ್ತದೆ ಎಂದರು.

ಬಸವಣ್ಣನ ಜೀವನ ಹಾಗೂ ಲಿಂಗಾಯಿತ ಧರ್ಮದ ಆರಂಭದ ದಿನಗಳ ಬಗ್ಗೆ ತಂಡಗಳು ಮಾಹಿತಿ ಸಂಗ್ರಹಿಸುತ್ತಿವೆ. ಮಾಹಿತಿ ಸಂಶೋಧನೆ ನಂತರ ಲಿಂಗಾಯಿತ ಧರ್ಮದ ಹುಟ್ಟಿನ ಬಗ್ಗೆ ರಾಜ್ಯದಲ್ಲಿನ ಜನರಿಗೆ ತಿಳಿಸಲಾಗುವುದು ಎಂದು ಹೇಳಿದರು.
ಸಕಾರಾತ್ಮಕ ಫಲಿತಾಂಶ ಸಿಗುವವರೆಗೂ ಹೋರಾಟವನ್ನು ತೀವ್ರಗೊಳಿಸಲಾಗುವುದು, ಈಗಲೂ ಕೂಡಾ ನಾವು ಹಿಂದೂಗಳಾಗಿಯೇ ಉಳಿದಿವೆ. ಭೌದ್ದ ಧರ್ಮದ ರೀತಿಯಲ್ಲಿ ಬಸವಧರ್ಮಕ್ಕೆ ಜಾಗತಿಕವಾಗಿ ಪ್ರತ್ಯೇಕ ಧರ್ಮದ ಸ್ಥಾನಮಾನ ದೊರೆಯಲಿದೆ ಎಂದು ಎಂ. ಬಿ. ಪಾಟೀಲ್ ತಿಳಿಸಿದರು.

Comments are closed.