ಕರ್ನಾಟಕ

ಸಾಲ ಮರು ಪಾವತಿಸಲು ಮಹಿಳೆಯ ಚಿನ್ನಾಭರಣ ಸುಲಿಗೆ: ದಂಪತಿ ಬಂಧನ

Pinterest LinkedIn Tumblr

ಕಲಬುರ್ಗಿ: ವಿಳಾಸ ಕೇಳುವ ನೆಪದಲ್ಲಿ ಕಾರಿನಲ್ಲಿ ಬಂದು ಚಿನ್ನಾಭರಣ ದೋಚಿದ್ದ ದಂಪತಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಜೇವರ್ಗಿ ಪಟ್ಟಣದ ವಿಜಯಕುಮಾರ್ ಸ್ಥಾವರಮಠ, ಇವರ ಪತ್ನಿ ನಾಗರತ್ನ ಸ್ಥಾವರಮಠ ಬಂಧಿತರು.

ಇವರಿಬ್ಬರೂ ವಿಳಾಸ ಕೇಳುವ ನೆಪದಲ್ಲಿ ಸುಷ್ಮಾ ಬಸವರಾಜ ಎಂಬುವರನ್ನು ತಮ್ಮ ಕಾರಿನಲ್ಲಿ ಅಪಹರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದರು. ಬಳಿಕ ಸುಷ್ಮಾ ಅವರ ಮೇಲೆ ಹಲ್ಲೆ ಮಾಡಿ ಅವರ ಬಳಿಯಿದ್ದ ₹4.74 ಲಕ್ಷ ಮೌಲ್ಯದ 150 ಗ್ರಾಂ ಚಿನ್ನಾಭರಣ, ನಗದು ₹300 ಹಾಗೂ ₹4 ಸಾವಿರ ಮೌಲ್ಯದ ಮೊಬೈಲ್ ಅಪಹರಿಸಿದ್ದರು.

ಸಾಲ ಮರು ಪಾವತಿಸಲು ಮಹಿಳೆಯನ್ನು ಬೆದರಿಸಿ ಚಿನ್ನಾಭರಣ ದೋಚಿದ್ದೇವೆ. ಅವುಗಳನ್ನು ಮಣಪ್ಪುರಂ ಗೋಲ್ಡ್‌ನಲ್ಲಿ ಅಡವಿಟ್ಟು ಸಾಲ ತೆಗೆದುಕೊಂಡಿದ್ದೆವು ಎಂದು ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿ ಬಿ.ಕಾಂ ಹಾಗೂ ಅವರ ಪತ್ನಿ ಎಂಬಿಎ ಪದವೀಧರರು. ಇವರು ವೃತ್ತಿಪರ ಸುಲಿಗೆಕೋರರಲ್ಲ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಮಾಹಿತಿ ನೀಡಿದರು. ಆರೋಪಿಗಳಿಂದ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ ಕಾರು, ಲೈಟರ್ ಮಾದರಿ ಪಿಸ್ತೂಲ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.