ಕರ್ನಾಟಕ

ಬೆಂಗಳೂರಿನ ಎಚ್​ಎಎಲ್ ಆವರಣದಲ್ಲಿ ಅನುಮಾನಾಸ್ಪದ ಸ್ಫೋಟ!

Pinterest LinkedIn Tumblr


ಬೆಂಗಳೂರು: ಬೆಂಗಳೂರಿನ ಎಚ್​ಎಎಲ್ ಆವರಣದಲ್ಲಿ ಅನುಮಾನಾಸ್ಪದ ಸ್ಫೋಟ ಸಂಭವಿಸಿದೆ. ಸಂಜೆ ೪:೩೦ರ ಸುಮಾರಿಗೆ ೪:೩೦ ರ ಸುಮಾರಿಗೆ ಎಲ್ .ಬಿ. ಶಾಸ್ತ್ರಿ ನಗರದಲ್ಲಿ ಈ ಸ್ಫೋಟ ಸಂಭವಿಸಿದ್ದು, ಸ್ಫೋಟದ ರಭಸಕ್ಕೆ 1 ಕಿ. ಮೀವರೆಗೆ ಭೂಮಿ ಕಂಪಿಸಿದೆ ಎಂದು ಹೇಳಲಾಗುತ್ತಿದೆ.

ಕಸದಲ್ಲಿ ಬಿಸಾಡಿದ್ದ ಬಂಡೆ ಒಡೆಯಲು ಬಳಸುವ ಜಿಲೆಟಿನ್ ಮದ್ದು ಸ್ಪೋಟಗೊಂಡಿರುವ ಸಾಧ್ಯತೆ ಇದ್ದು, ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಹೆಚ್ ಎಎಲ್ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ‌ ನಡೆಸಿದ್ದಾರೆ. ಈ ಕುರಿತಂತೆ ವೈಟ್ ಫೀಲ್ಡ್ ಡಿಸಿಪಿ ಅಬ್ದುಲ್ ಅಹಮದ್ ನ್ಯೂಸ್ 18 ಗೆ ಮಾಹಿತಿ ನೀಡಿದ್ದಾರೆ.

ಎಚ್​ಐಎಲ್ ಕ್ವಾಟ್ರಸ್ ನಿರ್ಮಾಣ ಮಾಡಲಾಗುತ್ತಿರುವ ಎಂಟೂವರೆ ಎಕರೆಯ ನಿವೇಶನ ಇದಾಗಿದ್ದು, ಇಲ್ಲಿ ಈ ಹಿಂದೆ ಬಂಡೆಗಳನ್ನ ಒಡೆಯಲು ಜಿಲೆಟಿನ್ ಕಡ್ಡಿ ಬಳಸಿರುತ್ತಾರೆ. ಅದೇ ಜಿಲೆಟಿನ್ ಕಸದಲ್ಲಿ ಇದ್ದಿರಬಹುದಾದ ಸಾಧ್ಯತೆ ಇದೆ. ಇವತ್ತು ಕಾರ್ಮಿಕರು ಕಸಕ್ಕೆ ಬೆಂಕಿ ಇಟ್ಟಾಗ ಸ್ಫೋಟ ಸಂಭವಿಸಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

ಇದೀಗ, ಸ್ಪೋಟದ ಸ್ಥಳಕ್ಕೆ ಶ್ವಾನ ದಳ, ಬಾಂಬ್ ಸ್ಕ್ವಾಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದ್ದು, ಅದೃಷ್ಟವಶಾತ್ ಪಕ್ಕದ ಶೆಡ್​ನಲ್ಲಿದ್ದ ನೂರಾರು ಕಾರ್ಮಿಕರಿಗೆ ಯಾವುದೇ ಅಪಾಯ ಆಗಿಲ್ಲ. ಸ್ಥಳದಲ್ಲಿದ್ದ ಕಾರ್ಮಿಕರ ಶೆಡ್​ಗಳನ್ನ ಪೊಲೀಸರು ತೆರವುಗೊಳಿಸಿದ್ದಾರೆ.

Comments are closed.