ಕರ್ನಾಟಕ

ರಾಗಿ ಮುದ್ದೆ, ನಾಟಿ ಕೋಳಿ ಸಾರು ತಿನ್ನುವ ಸ್ಪರ್ಧೆಯಲ್ಲಿ ವಿಜೇತರಾದ ‘ಮೀಸೆ’ ಈರೇಗೌಡ

Pinterest LinkedIn Tumblr

ಮಂಡ್ಯ: ಮಂಡ್ಯ ತಾಲೂಕಿನ ಮಂಗಲ ಗ್ರಾಮದಲ್ಲಿ ಭಾನುವಾರ ನಡೆದ ರಾಗಿ ಮುದ್ದೆ ಮತ್ತು ನಾಟಿ ಕೋಳಿ ಸಾರು ತಿನ್ನುವ ಸ್ಪರ್ಧೆಯಲ್ಲಿ ಶ್ರೀರಂಗಪಟ್ಟಣದ ಅರಕೆರೆ ಗ್ರಾಮದ ಮೀಸೆ ಈರೇಗೌಡ ಅವರು 6 ರಾಗಿ ಮುದ್ದೆ (3 ಕೆಜಿ) ತಿನ್ನುವ ಮೂಲಕ ಪ್ರಥಮ ಸ್ಥಾನ ಪಡೆದಿದ್ದಾರೆ.

54 ವರ್ಷದ ಈರೇಗೌಡ ಅವರು 20 ನಿಮಿಷಗಳಲ್ಲಿ ಮೂರು ಕೆಜಿ ಮುದ್ದೆ ತಿನ್ನುವ ಮೂಲಕ ಐದು ಸಾವಿರ ನಗದು ಹಾಗೂ ಟ್ರೋಫಿ ತಮ್ಮದಾಗಿಸಿಕೊಂಡರು. ಈರೇಗೌಡ ಅವರು ರಾಗಿ ಮುದ್ದೆ ತಿನ್ನುವ ಸ್ಪರ್ಧೆಯಲ್ಲಿ ಒಟ್ಟು 9ನೇ ಬಾರಿ ಮೊದಲ ಸ್ಥಾನ ಪಡೆದಿದ್ದಾರೆ.

ಇನ್ನು ಸುರೇಶ್‌ ಎಂಬುವವರು 5.45 ಮುದ್ದೆ(2.75ಕೆಜಿ) ತಿಂದು ಎರಡನೇ ಸ್ಥಾನಗಳಿಸಿ 3 ಸಾವಿರ ರು. ಪಡೆದರು. ರಾಮಮೂರ್ತಿ 5 ಮುದ್ದೆ(2.50ಕೆಜಿ) ಉಂಡು ತೃತೀಯ ಸ್ಥಾನಗಳಿಸಿ 2 ಸಾವಿರ ನಗದು ಪಡೆದರು. ತಲಾ 5 ಮುದ್ದೆ ಉಂಡ ನಂದೀಶ್‌, ಕಾರಸವಾಡಿ ಶಂಕರೇಗೌಡ, ಎಚ್‌.ಡಿ.ಯೋಗೇಶ್‌, ನಾಗೇಶ್‌ ಅವರಿಗೆ ತಲಾ 1 ಸಾವಿರ ನಗದಿನೊಂದಿಗೆ ಸಮಾಧಾನಕರ ಬಹುಮಾನ ವಿತರಣೆ ಮಾಡಿದರು.

ಜಿಲ್ಲಾಮಟ್ಟದ ನಾಟಿಕೋಳಿ ಸಾರು-ಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಸುಮಾರು 65 ಸ್ಪರ್ಧಾಳುಗಳು ಭಾಗವಹಿಸಿದ್ದರು. ಭಾಗವಹಿಸುವ ಪ್ರತಿ ಸ್ಪರ್ಧಾಳುಗೆ ಆಯೋಜಕರಿಗೆ 100 ಸ್ಪರ್ಧಾ ಶುಲ್ಕ ವಿಧಿಸಿದ್ದರು.

Comments are closed.