ಕರ್ನಾಟಕ

ಅಕ್ರಮ ಸಂಬಂಧ ಇಟ್ಟುಕೊಂಡ ಪತಿಯಿಂದಾಗಿ ತನಗೂ ಸೋಂಕು ಹರಡಿದೆ: ಪತಿ ವಿರುದ್ಧ ಪೊಲೀಸ್ ಠಾಣಾ ಮೆಟ್ಟಿಲೇರಿದ ಪತ್ನಿ

Pinterest LinkedIn Tumblr

ಬೆಂಗಳೂರು: ತನ್ನ ಪತಿಯಿಂದ ತನಗೆ ಲೈಂಗಿಕ ಸಂಪರ್ಕದಿಂದ ಹರಡುವ ಸೋಂಕು ಹರಡಿದೆ ಎಂದು ಆರೋಪಿಸಿ 28 ವರ್ಷದ ಮಹಿಳೆಯೊಬ್ಬರು ಜೀವನ್ ಭೀಮಾನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಕಾನೂನು ಪದವೀಧರೆಯಾಗಿರುವ ಮಹಿಳೆ ಪತಿಯ ವಿರುದ್ಧ ವರದಕ್ಷಿಣೆಯ ಕಿರುಕುಳ ಆರೋಪವನ್ನೂ ಮಾಡಿದ್ದು, ತನ್ನ ಪತಿ ಅಕ್ರಮ ಸಂಬಂಧಗಳನ್ನು ಹೊಂದಿದ್ದು, ಇದರಿಂದಾಗಿ ತನಗೂ ಲೈಂಗಿಕ ಸಂಪರ್ಕದಿಂದ ಉಂಟಾಗುವ ಸೋಂಕು ತಗುಲಿದೆ ಎಂದು ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡಿರುವ ಪೊಲೀಸರು ಲೈಂಗಿಕ ಸೋಂಕು ತಗುಲಿರುವುದರ ಬಗ್ಗೆ ವೈದ್ಯಕೀಯ ವರದಿ ನೀಡುವಂತೆ ಮಹಿಳೆಗೆ ಸೂಚನೆ ನೀಡಿದ್ದಾರೆ.

2017 ರಲ್ಲಿ ನಾನು ಗರ್ಭಿಣಿಯಾದೆ, ಆದರೆ ಇದಕ್ಕೆ ನನ್ನ ಪತಿ ವಿರೋಧಿಸಿದ್ದರು. ಅಷ್ಟೇ ಅಲ್ಲದೇ ನನ್ನ ಮೇಲೆ ಹಲ್ಲೆ ನಡೆಸಿದ್ದರಿಂದ ಗರ್ಭಪಾತವೂ ಆಯಿತು. ಈ ಅಘಾತದಿಂದಾಗಿ ಖಿನ್ನತೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಈ ನಡುವೆ ನನ್ನ ಪತಿ ಬೇರೆ ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಇದಾದ ಕೆಲವೇ ದಿನಗಳಲ್ಲಿ ನಾನು ಆಸ್ಪತ್ರೆಗೆ ತೆರಳಿದಾಗ ವೈದ್ಯರು ನನಗೂ ಹೆಚ್ ಐ ವಿ ಇದೆ ಎಂದು ಹೇಳಿದ್ದರು. ಈ ವಿಷಯದ ಬಗ್ಗೆ ಪತಿಯೊಂದಿಗೆ ಚರ್ಚಿಸಲು ಮುಂದಾದಾಗ ನನ್ನ ಮೇಲೆ ಮಾನಸಿಕ, ದೈಹಿಕ ದಾಳಿ ನಡೆದಿದೆ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ.

Comments are closed.