ಕರ್ನಾಟಕ

ಟಿಪ್ಪು ವಿವಾದವನ್ನು ಜಮೀರ್‌ ಮೂಲಕ ಸರಕಾರ ಕೆಣಕುತ್ತಿದೆ : ಜಗದೀಶ್ ಶೆಟ್ಟರ್‌

Pinterest LinkedIn Tumblr


ಹುಬ್ಬಳ್ಳಿ: ರಾಜ್ಯದಲ್ಲಿ ಸರಕಾರ ಇದೆಯೋ‌ ಇಲ್ಲವೋ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನಾದೇಶಕ್ಕೆ ವಿರುದ್ದವಾಗಿ ಈ ಸರಕಾರ ರಚನೆಯಾಗಿದೆ. ಕಾಂಗ್ರೆಸ್‌ ಅನ್ನು ಜನ ಸೋಲಿಸಿದ್ದಾರೆ. ಆದರೂ ಹಿಂಬಾಗಿಲಿನ ಮೂಲಕ ಅಧಿಕಾರ‌ ಹಿಡಿದಿದೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಜಗದೀಶ್‌ ಶೆಟ್ಟರ್‌ ಹೇಳಿದರು.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರ ಇನ್ನೂ ಟೇಕಾಫ್ ಆಗಿಲ್ಲ. ಜಮೀರ್‌ ಎಂಬ ಮಂತ್ರಿ‌ ಮೂಲಕ ಟಿಪ್ಪು ವಿವಾದವನ್ನು ಮತ್ತೆ ಎಬ್ಬಿಸಿದ್ದಾರೆ. ಟಿಪ್ಪು ಬದಲು ಶಿಶುನಾಳ ಶರೀಫ್‌ ಅಥವಾ ಅಬ್ದುಲ್‌ ಕಲಾಂ ಹೆಸರಿಟ್ಟರೆ ಅದಕ್ಕೊಂದು ಅರ್ಥ ಬರುತ್ತದೆ ಎಂದರು.

ಟಿಪ್ಪು ಒಬ್ಬ ಮತಾಂಧ, ಒಬ್ಬ ಸಮಾಜ ದ್ರೋಹಿ ಅವರ ಹೆಸರು ಹಜ್ ಭವನಕ್ಕೆ ಇಡಬಾರದು ಎಂದು ಸಂಸದ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.ಅದರ ಬದಲು ಹಜ್ ಭವನಕ್ಕೆ ಅಬ್ದುಲ್ ಕಲಾಂ ಹೆಸರಿಡಲಿ. ಅದಕ್ಕೂ ಒಳ್ಳೆಯದಾಗುತ್ತದೆ, ಹಜ್ ಯಾತ್ರೆ ಹೋದವರಿಗೂ ಒಳ್ಳೆಯದಾಗುತ್ತದೆ. ಮೊದಲು ಬಿಜೆಪಿಯವರೇ ಒಪ್ಪಿಗೆ ನೀಡಿದ್ದಾರೆ ಎನ್ನುವ‌ ಸಚಿವ ಜಮೀರ್ ಹೇಳಿಕೆ ಬಗ್ಗೆ ಪ್ರತಿಕ್ರಯಿಸಿದ ಜೋಶಿ, ಕೆಲವರು ತಪ್ಪು ತಿಳಿಳಿಕೆಯಿಂದ ಆ ರೀತಿ‌ ಮಾಡಿರಬಹುದು ಎಂದರು.

ಸಿದ್ದರಾಮಯ್ಯ ರೀತಿ ಕುಮಾರಸ್ವಾಮಿ ಮಾಡಬಾರದು, ಅವರಿಗೆ ಏನಾಗಿದೆ ಅಂತ ಗೊತ್ತು. ಕಾವೇರಿ ನೀರು ನಿರ್ವವಣೆ ಮಂಡಳಿ ರಚನೆ ವಿಚಾರದಲ್ಲಿ ಇಷ್ಟು ಹೊತ್ತು ಇವರು ಮಲಗಿದ್ದರೇ, ಈ ರೀತಿ ಅಪಾದನೆ‌ ಯಾಕೆ ಬರುತ್ತಿದೆ, ಇವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದಿತ್ತು. ಅದನ್ನು ಬಿಟ್ಟು ಈಗ ಆರೋಪ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.

ಕಾವೇರಿ ಪ್ರಾದಿಕಾರ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಗಡುವು ನೀಡಿತ್ತು. ಹೀಗಾಗಿ‌ ಕೋರ್ಟ್‌ ಆದೇಶದಂತೆ ರಚನೆ‌ ಮಾಡಲಾಗಿದೆ ಎಂದರು.

Comments are closed.