ಕರ್ನಾಟಕ

ಶ್ರೀರಾಮ ಸೇನೆ ಮುಖಂಡ ಪ್ರಮೋದ ಮುತಾಲಿಕ್‌ ಹುಚ್ಚು ನಾಯಿ: ಬಸವರಾಜ ಸೂಳಿಬಾವಿ

Pinterest LinkedIn Tumblr


ಗದಗ: ಶ್ರೀರಾಮ ಸೇನೆ ಮುಖಂಡ ಪ್ರಮೋದ ಮುತಾಲಿಕ್‌ ಧಾರ್ಮಿಕ ಅಂಧತ್ವ ತುಂಬಿ ಕೊಂಡ ಹುಚ್ಚುನಾಯಿ ಇದ್ದಂತೆ ಎಂದು ಹತ್ಯೆ ವಿರೋಧಿ ಹತ್ಯೆ ವಿರೋಧಿ ಸಮಿತಿಯ ಅಧ್ಯಕ್ಷ ಬಸವರಾಜ ಸೂಳಿಬಾವಿ ಶುಕ್ರವಾರ ಕಿಡಿ ಕಾರಿದ್ದಾರೆ.

ಗದಗದಲ್ಲಿ ಗೌರಿ ಲಂಕೇಶ್‌, ಎಂ.ಎಂ.ಕಲಬುರ್ಗಿ, ದಾಬೋಲ್ಕರ್‌, ಪಾನ್ಸರೆ ಹತ್ಯೆ ವಿರೋಧಿಸಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪ್ರಮೋದ್‌ ಮುತಾಲಿಕ್‌ರನ್ನು ಬಂಧಿಸಿ ವಿಚಾರಣೆ ಮಾಡಬೇಕು ಎಂದು ಮನವಿ ಮಾಡಿದರು.

ಮುತಾಲಿಕ್‌ ಕ್ರೌರ್ಯವನ್ನು ವಿಸ್ತರಿಸುತ್ತಿದ್ದು ಎಸ್‌ಐಟಿ ಕೂಡಲೇ ಬಂಧಿಸಿ ವಿಚಾರಣೆ ನಡೆಸಬೇಕು ಎಂದರು.

ದೇಶದಲ್ಲಿ ಕೇಸರಿ ಭಯೋತ್ಪಾದನೆ ನಡೆಯುತ್ತಿದ್ದು, ಕೇಂದ್ರ ಸರ್ಕಾರ ಇದನ್ನು ಒಪ್ಪಿಕೊಳ್ಳಬೇಕು.ಕೇಸರಿ ಭಯೋತ್ಪಾದನೆ ನಿಗ್ರಹದಳ ರಚನೆ ಮಾಡಬೇಕು.ಹಿಂದು ಸಂಘಟನೆಗಳನ್ನು ತನಿಖೆಗೆ ಒಳಪಡಿಸಬೇಕು ಎಂದರು.

ಇದೇ ವೇಳೆ ಗೌರಿ ಹತ್ಯೆಯ ಶಂಕಿತ ಆರೋಪಿಗಳನ್ನು ಬಂಧಿಸಿದ್ದಕ್ಕಾಗಿ ರಾಜ್ಯ ಸರ್ಕಾರ ಮತ್ತು ಎಸ್‌ಐಟಿಗೆ ಅಭಿನಂದನೆ ಸಲ್ಲಿಸಿದರು.

Comments are closed.