ಕರ್ನಾಟಕ

ಬೇಳೂರು ಗೋಪಾಲಕೃಷ್ಣ ಆರೋಪಕ್ಕೆ ಕರಂದ್ಲಾಜೆ ತಿರುಗೇಟು!

Pinterest LinkedIn Tumblr


ಚಿಕ್ಕಮಗಳೂರು: ಸಂಸದೆ ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್‌ ಮುಖಂಡ ಬೇಳೂರು ಗೋಪಾಲಕೃಷ್ಣ ಅವರ ಆರೋಪಕ್ಕೆ ತಿರುಗೇಟು ನೀಡಿದ್ದು,ಯಾರೂ ಬೇಕಾದರೂ ನಮ್ಮ ಮನೆಯ ಮೇಲೆ ದಾಳಿ ನಡೆಸಿ ತನಿಖೆ ಮಾಡಿದರೆ ತೊಂದರೆ ಇಲ್ಲ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ ಅವರದ್ದೇ ಸರ್ಕಾರ ಇದೆ , ಮಂತ್ರಿಗಳು ಇದ್ದಾರೆ, ಅವರಿಗೆ ತನಿಖೆ ಮಾಡುವ ಸಾಕಷ್ಟು ಅವಕಾಶಗಳು ಇವೆಯಲ್ಲ ಎಂದು ಸವಾಲು ಹಾಕಿದರು.

ಬಿಜೆಪಿ ಟಿಕೆಟ್‌ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ರಾಜಕೀಯ ಹೇಳಿಕೆ ನೀಡಿದ್ದು ಅದಕ್ಕೆ ನಾನು ಉತ್ತರ ನೀಡುವುದಿಲ್ಲ ಎಂದರು.

ಕಾಂಗ್ರೆಸ್‌ ಜೆಡಿಎಸ್‌ನವರ ಪಾಪಕ್ಕೆ ಅವರೇ ಕುಸಿದು ಹೋಗುತ್ತಾರೆ. ನಾವು ಆ ಸಮಯಕ್ಕೆ ಕಾಯುತ್ತಿದ್ದೇವೆ ಎಂದರು.

ಬೇಳೂರು ಗೋಪಾಲಕೃಷ್ಣ ಅವರು ಶೋಭಾ ಮೇಡಂ ಮನೆ ಮೇಲೆ ಐಟಿ ದಾಳಿ ಮಾಡಿದರೆ ಯಡಿಯೂರಪ್ಪ ಅವರ ಖಜಾನೆ ಸಿಗುತ್ತದೆ ಎಂದಿದ್ದರು.

Comments are closed.