ಕರ್ನಾಟಕ

ಬಿಎಸ್‌ವೈ ಅಧಿಕಾರಕ್ಕೆ ಬರಬಾರದೆಂದು ಹೊತ್ತಿದ್ದ ದೇವರ ಹರಕೆ ತೀರಿಸಿದ್ದೇನೆ: ಬೇಳೂರು ಗೋಪಾಲಕೃಷ್ಣ

Pinterest LinkedIn Tumblr

ಶಿವಮೊಗ್ಗ: ಬಿಜೆಪಿ ಅಧಿಕಾರಕ್ಕೆ ಬರಬಾರದು, ಬಿ. ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಬಾರದೆಂದು ಶಿಕಾರಿಪುರದ ನನ್ನ ಮನೆ ದೇವರಾದ ಹುಚ್ಚುರಾಯಸ್ವಾಮಿಗೆ ಹರಕೆ ಹೊತ್ತಿದ್ದೆ. ಈ ಬಾರಿ ಯಡಿಯೂರಪ್ಪನವರಿಗೆ ಅಧಿಕಾರ ಸಿಗದೆ ಹೋಗಿದ್ದು ನನ್ನ ಹರಕೆ ಫಲಿಸಿದೆ. ನಾನು ದೇವರ ಹರಕೆ ತೀರಿಸಿದ್ದೇನೆ ಎಂದು ಸಾಗರ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೇಳೂರು ಗೋಪಾಲಕ್ಷ್ಣ ಯಡಿಯೂರಪ್ಪ ನನಗೆ ವಂಚಿಸಿದ್ದರು. ಅವರಿಗೆ ರಾಜ್ಯದ ಜನ ಅಧಿಕಾರ ನಿಡುವಂತಾಗಬಾರದು ಎಂದು ದೇವರಲ್ಲಿ ಕಟ್ಟಿಕೊಂಡ ಹರಕೆ ಈಡೇರಿದೆ ಎಂದಿದ್ದಾರೆ.

“150 ಸ್ಥಾನದ ಗುರಿಯಿಟ್ಟುಕೊಂಡು ಪ್ರಚಾರ ಮಾಡಿದ್ದ ಯಡಿಯೂರಪ್ಪ ಸೋತಿದ್ದಾರೆ. ಅವರ ಆಟ ಮುಗಿದಿದೆ. ಭ್ರಷ್ಟಾಚಾರ ನಡೆಸಿ ಜೈಲು ಪಾಲಾದವರನ್ನು ಜನತೆ ಒಪ್ಪಿಕೊಳ್ಳುವುದಿಲ್ಲ”

ಜೆಡಿಎಸ್-ಕಾಂಗ್ರೆಸ್ ಅಪವಿತ್ರ ಮೈತ್ರಿ ಎನ್ನುವ ಯಡಿಯೂರಪ್ಪ ಹಿಂದೆ ಅದೇ ಪಕ್ಷದೊಡನೆ ಸೇರಿ ಉಪಮುಖ್ಯಮಂತ್ರಿಯಾಗಿದ್ದರು ಎಂದು ವ್ಯಂಗ್ಯ ಆಡಿದ ಬೇಳೂರು ಶಿವಮೊಗ್ಗದಲ್ಲಿ ಕಾಂಗ್ರೆಸ್ ಸೋಲಿಗೆ ಇವರೇ ಕಾರಣ ಎಂದಿದ್ದಾರೆ.

ಶೋಭಾ ಕರಂದ್ಲಾಜೆ ಮನೆ ಮೇಲೆ ಐಟಿ ದಾಳಿ ನಡೆಯಲಿ!
ಬಿಜೆಪಿಯ ಅಕ್ರಮ ಸಂಪತ್ತು ಶೋಭಾ ಅವರ ಮನೆಯಲ್ಲಿದ್ದು ಅವರ ಮನೆ ಮೇಲೆ ಐಟಿ ದಾಲಿ ನಡೆದರೆ ಯಡಿಯೂರಪ್ಪ ಅವರ ಭ್ರಷ್ಟಾಚಾರದ ಹಣ ಬಯಲಿಗೆ ಬರಲಿದೆ ಎಂದು ಮಾಜಿ ಶಾಸಕರು ಕುಟುಕಿದ್ದಾರೆ.

“ಬಿಜೆಪಿಯ ಎಂಟು ಶಾಸಕರು ಕಾಂಗ್ರೆಸ್ ನ ಸಂಪರ್ಕದಲ್ಲಿದ್ದಾರೆ. ಅದರಲ್ಲಿಯೂ ಮೂವರು ಶಾಸಕರು ನನ್ನ ಜತೆ ಸಂಪರ್ಕ ಹೊಂದಿದ್ದಾರೆ.ಅವರೆಲ್ಲಾ ಸಧ್ಯವೇ ಕಾಂಗ್ರೆಸ್ ಜತೆ ಸೇರಲಿದ್ದಾರೆ” ಗೋಪಾಲಕೃಷ್ಣ ಹೇಳಿದ್ದಾರೆ.

“ಪಕ್ಷ ಯಾವುದೇ ಜವಾಬ್ದಾರಿಯನ್ನು ನೀಡ್ದಲ್ಲಿ ಅದನ್ನು ನಿರ್ವಹಿಸುತ್ತೇನೆ” ಅವರು ತಿಳಿಸಿದರು.

Comments are closed.