ಕರ್ನಾಟಕ

ಜಯನಗರದಲ್ಲಿ ಬಿಜೆಪಿ ಸೋಲಿಗೆ ಯಾರನ್ನೂ ಹೊಣೆ ಮಾಡುವುದಿಲ್ಲ, ಇದು ಕಡಿಮೆ ಅಂತರದ ಸೋಲು: ಯಡಿಯೂರಪ್ಪ

Pinterest LinkedIn Tumblr


ಬೆಂಗಳೂರು: ಜಯನಗರದಲ್ಲಿ ನಮಗೆ ಕಡಿಮೆ ಅಂತರದ ಸೋಲಾಗಿದೆ. ಸೋಲಿಗೆ ಯಾರನ್ನೂ ದೂರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

ಬುಧವಾರ ಫ‌ಲಿತಾಂಶ ಪ್ರಕಟವಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ವೈ ‘ ಮತ ನೀಡಿದ ಎಲ್ಲರಿಗೂ ನನ್ನ ಅಭಿನಂದನೆ. ಜನರ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ನಮ್ಮ ಕಾರ್ಯಕರ್ತರು ಹಾಗೂ ಮುಖಂಡರು ಶ್ರಮ ವಹಿಸಿದ್ದಾರೆ. ನಾವು ಕಡಿಮೆ ಅಂತರದಲ್ಲಿ ಸೋತಿರುವುದು ಬೇಸರ ತಂದಿದೆ’ ಎಂದರು.

ಯಾವುದೇ ಪಾಲಿಕೆ ಸದಸ್ಯರಾಗಲಿ, ಮುಖಂಡರಾಗಲಿ ನಮ್ಮ ಅಭ್ಯರ್ಥಿಯ ವಿರುದ್ಧ ಕೆಲಸ ಮಾಡಿಲ್ಲ . ನಾವು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯ ವಿರುದ್ಧ ಸರಿಯಾದ ತಂತ್ರ ಬಳಸಬೇಕಿತ್ತು. ಕಳೆದ ಬಾರಿಗಿಂತ ನಾವು 7 ಸಾವಿರ ಹೆಚ್ಚು ಮತಗಳನ್ನು ಪಡೆದಿದ್ದೇವೆ ಎಂದರು.

ಎಚ್‌ಡಿಕೆ ವಿರುದ್ಧ ಕಿಡಿ
ವಿಧಾನಸೌಧದಲ್ಲಿ ಭ್ರಷ್ಟಾಚಾರ ಕಂಡಿದ್ದೇನೆ ಎಂದಿರುವ ಮುಖ್ಯಮಂತ್ರಿಳು ಅಧಿಕಾರ ಹೇಗೆ ನಡೆಸುತ್ತಾರೆ ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿ ಕಾರಿದರು.

Comments are closed.