ಬೆಂಗಳೂರು: ನರಗದ ಗೋರಗುಂಟಎ ಪಾಳ್ಯದ ಎಚ್‌ಪಿ ಪೆಟ್ರೋಲ್ ಬಂಕ್‌ಗೆ ಬ್ರೇಕ್ ಫೇಲ್ ಆದ ಕೆಎಸ್‌ಆರ್‌ಟಿಸಿ ಬಸ್ಸೊಂದು ನುಗ್ಗಿದ ಘಟನೆ ಮಂಗಳವಾರ ನಡೆದಿದ್ದು, ಅದೃಷ್ಟವಷಾತ್ ಭಾರೀ ಅನಾಹುತ ತಪ್ಪಿ ಹೋಗಿದೆ.
ಹಾಸನದಿಂದ ಮೆಜೆಸ್ಟಿಕ್‌ನತ್ತ ತೆರಳುತ್ತಿದ್ದ ಬಸ್ ಗೋರಗುಂಟೆ ಪಾಳ್ಯ ಸಿಗ್ನಲ್‌ನಲ್ಲಿ ಬ್ರೇಕ್ ವೈಫಲ್ಯಕ್ಕೀಡಾಗಿದ್ದು ಬಂಕ್ ಒಳಗೆ ನುಗ್ಗಿದೆ ಅದೃಷ್ಟವಷಾತ್ ಯಾವುದೇ ಪ್ರಾಣ ಹಾನಿಯಾಗಲಿ ಯಾವುದೇ ವ್ಯಕ್ತಿಗೆ ಗಾಯಗಳಾಗಲಿ ಆಗಿಲ್ಲ. ಬಂಕ್‌ನ ಕೆಲ ಪರಿಕರಗಳು, ಕಂಪೌಂಡ್ ಮತ್ತು 2 ದ್ವಿಚಕ್ರ ವಾಹನಗಳು ಜಖಂಗೊಂಡಿವೆ.
ಬಂಕ್ ಮಾಲೀಕರು ಆರ್‌ಎಂಸಿ ಠಾಣೆಗೆ ದೂರು ನೀಡಿದ್ದು,15 ಲಕ್ಷ ರೂಪಾಯಿ ನಷ್ಟ ಸಂಭವಿಸಿದ್ದು, ಕೆಎಸ್‌ಆರ್‌ಟಿಸಿ ಭರಿಸಬೇಕು ಎಂದು ಕೇಳಿಕೊಂಡಿದ್ದಾರೆ.
Comments are closed.