ಕರ್ನಾಟಕ

ಕಾಂಗ್ರೆಸ್ ನ ಭಿನ್ನಮತೀಯ ಶಾಸಕ ಪಾಟೀಲರನ್ನು ಭೇಟಿ ಮಾಡಿದ ರಾಯಚೂರು ಶಾಸಕ ಶಿವರಾಜ್ ಪಾಟೀಲ್; ಊಹಾಪೋಹಕ್ಕೆ ಇನ್ನಷ್ಟು ಪುಷ್ಟಿ

Pinterest LinkedIn Tumblr

ಬೆಂಗಳೂರು: ಕಾಂಗ್ರೆಸ್ ನ ಭಿನ್ನಮತೀಯ ಶಾಸಕ ಎಂ ಬಿ ಪಾಟೀಲ್ ಅವರನ್ನು ರಾಯಚೂರು ಕ್ಷೇತ್ರದ ಶಾಸಕ ಶಿವರಾಜ್ ಪಾಟೀಲ್ ಭೇಟಿ ಮಾಡಿದ್ದು ಭಿನ್ನಮತೀಯ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ ಎಂಬ ಊಹಾಪೋಹಕ್ಕೆ ಇನ್ನಷ್ಟು ಪುಷ್ಟಿ ಸಿಕ್ಕಿದೆ.

ಇಬ್ಬರೂ ನಾಯಕರು ಖಾಸಗಿಯಾಗಿ ಸುಮಾರು 30 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್ ಪಾಟೀಲ್, ಇದೊಂದು ಸಾಮಾನ್ಯ ಸೌಹಾರ್ದಯುತ ಭೇಟಿಯಾಗಿದ್ದು ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದಿದ್ದಾರೆ.

ನಾವು ದೀರ್ಘಕಾಲದಿಂದ ಸ್ನೇಹಿತರು ಮತ್ತು ರಾಜಕೀಯ ಚೌಕಟ್ಟುಗಳನ್ನು ಮೀರಿ ನಮ್ಮ ಸ್ನೇಹವಿದೆ. ನನ್ನ ಹಳೆ ಸ್ನೇಹಿತ ಎಂ ಬಿ ಪಾಟೀಲ್ ನ್ನು ಭೇಟಿ ಮಾಡಲು ನಾನು ಬಂದಿದ್ದೆ. ನಮ್ಮ ಮಾತುಕತೆಯಲ್ಲಿ ರಾಜಕೀಯವಿರಲಿಲ್ಲ ಎಂದಿದ್ದಾರೆ.

ಇನ್ನೊಂದಡೆ ಎಂ ಬಿ ಪಾಟೀಲ್ ಪ್ರತಿಕ್ರಿಯೆ ನೀಡಿ ಸಚಿವ ಸಂಪುಟ ರಚನೆಯಲ್ಲಿ ತಮ್ಮ ದೂರವಿಟ್ಟಿದ್ದರಿಂದ ಬೇಸರವಾದರೂ ಕೂಡ ತಾವು ಕಾಂಗ್ರೆಸ್ ನಲ್ಲಿಯೇ ಉಳಿಯುವುದಾಗಿ ಹೇಳಿದ್ದಾರೆ.

Comments are closed.