ಕರ್ನಾಟಕ

ಪತ್ರಕರ್ತೆ ಗೌರಿ ಲಂಕೇಶ್, ಪ್ರಗತಿಪರ ಚಿಂತಕ ಎಂ.ಎಂ.ಕಲಬುರ್ಗಿ ಹತ್ಯೆಗೆ ಬಳಸಲಾದ ಗನ್‌ ಒಂದೇ: ವಿಧಿವಿಜ್ಞಾನ ವರದಿ

Pinterest LinkedIn Tumblr


ಬೆಂಗಳೂರು: ಪತ್ರಕರ್ತೆ, ಕಾರ್ಯಕರ್ತೆ, ಗೌರಿ ಲಂಕೇಶ್‌ ಮತ್ತು ಪ್ರಗತಿಪರ ಚಿಂತಕ ಎಂ ಎಂ ಕಲಬುರ್ಗಿ ಅವರನ್ನು ಹತ್ಯೆಗೈಯಲು ಒಂದೇ ಗನ್‌ ಬಳಸಲಾಗಿದೆ ಎಂದು ರಾಜ್ಯದ ವಿಧಿ ವಿಜ್ಞಾನ ಪ್ರಯೋಗಾಲಯ ತನ್ನ ವರದಿಯಲ್ಲಿ ದೃಢೀಕರಿಸಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಕೆ ಟಿ ನವೀನ್‌ ಕುಮಾರ್‌ ಎಂಬಾತನನ್ನು ಓರ್ವ ಆರೋಪಿಯಾಗಿ ಹೆಸರಿಸಿ ಸಲ್ಲಿಸಲಾಗಿರುವ ಚಾರ್ಜ್‌ ಶೀಟ್‌ನ ಭಾಗವಾಗಿ ಈ ವಿಧಿ ವಿಜ್ಞಾನ ವರದಿಯನ್ನು ಎಐಟಿಗೆ ಸಲ್ಲಿಸಲಾಗಿದೆ.

ಆದರೆ ಕುಮಾರ್‌ ಎಸ್‌ಐಟಿಗೆ ನೀಡಿರುವ ಹೇಳಿಕೆಯಲ್ಲಿ ತಾನು ಗೌರಿ ಲಂಕೇಶ್‌ ಹತ್ಯೆಗೆ ಬುಲೆಟ್‌ಗಳನ್ನು ಒದಗಿಸಲು ವಿಫ‌ಲನಾಗಿದ್ದೆ ಎಂದು ಹೇಳಿದ್ದ.

ಎರಡು ವರ್ಷಗಳ ಅವಧಿಯ ಅಂತರದಲ್ಲಿ ನಡೆದಿರುವ ಕಲಬುರ್ಗಿ ಮತ್ತು ಗೌರಿ ಲಂಕೇಶ್‌ ಹತ್ಯೆಗಿರುವ ನಂಟನ್ನು ಮೊದಲ ಬಾರಿಗೆ ಅಧಿಕೃತವಾಗಿ ದೃಢೀಕರಿಸಿರುವ ಚಾರ್ಜ್‌ ಶೀಟ್‌ ಇದಾಗಿದೆ.

Comments are closed.