ಕರ್ನಾಟಕ

ಹಿರಿಯ ಪತ್ರಕರ್ತ ಅಮೀನ್‌ ಮಟ್ಟು ವಿರುದ್ಧ ಕೊಲೆ ಸುಪಾರಿ ಆರೋಪ: ಭಾಸ್ಕರ್‌ ಪ್ರಸಾದ್‌ ಬಂಧನ

Pinterest LinkedIn Tumblr


ಬೆಂಗಳೂರು: ಹಿರಿಯ ಪತ್ರಕರ್ತ ದಿನೇಶ್‌ ಅಮೀನ್‌ ಮಟ್ಟು ಕೊಲೆ ಸುಪಾರಿ ನೀಡಿದ್ದಾರೆ ಎಂದು ಸಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸಿದ್ದ ಭಾಸ್ಕರ್‌ ಪ್ರಸಾದ್‌ ಅವರನ್ನು ಡಿಜೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಅಂಕಣಕಾರ ರೋಹಿತ್‌ ಚಕ್ರತೀರ್ಥ ಹಾಗೂ ತನ್ನನ್ನು ಕೊಲೆ ಮಾಡಲು, ಸುಪಾರಿ ನೀಡಿರುವುದಾಗಿ ಭಾಸ್ಕರ್‌ ಪ್ರಸಾದ್‌ ಫೇಸ್‌ಬುಕ್‌ನಲ್ಲಿ ಬರೆದಿದ್ದರು. ಅಲ್ಲದೆ ಸುಮಾರು 40 ನಿಮಿಷಗಳ ವೀಡಿಯೋವನ್ನೂ ಹರಿಬಿಟ್ಟಿದ್ದರು. ಈ ಸಂಬಂಧ ದಿನೇಶ್‌ ಅಮೀನ್‌ ಮಟ್ಟು ಪೊಲೀಸರಿಗೆ ದೂರು ನೀಡಿದ್ದರು.

ದೂರಿನನ್ವಯ ಭಾಸ್ಕರ್‌ ಪ್ರಸಾದ್‌ ಅವರನ್ನು ಬುಧವಾರ ಬೆಳಗ್ಗೆ ಬಂಧಿಸಿದ್ದಾರೆ. ಈ ವೇಳೆ ಭಾಸ್ಕರ್‌ ತನ್ನ ಆರೋಗ್ಯ ಏರುಪೇರಾಗುತ್ತಿದ್ದು, ಕಡಿಮೆ ರಕ್ತದೊತ್ತಡದ ಸಮಸ್ಯೆ ಇರುವುದಾಗಿ ಹೇಳಿದ್ದಾರೆ. ಕೂಡಲೇ ಅಂಬ್ಯುಲೆನ್ಸ್‌ ತರಿಸಿ, ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ, ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಭಾಸ್ಕರ್‌ ಆರೋಗ್ಯ ಸುಧಾರಣೆಯಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎನ್ನಲಾಗಿದೆ.

ರಾತ್ರಿ ಎಲ್ಲ ಕಾದ ಕುಳಿತ ಪೊಲೀಸರು

ಮಂಗಳವಾರ ರಾತ್ರಿಯೇ ಭಾಸ್ಕರ್ ಮನೆಗೆ ಆಗಮಿಸಿದ ಪೊಲೀಸರು, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಭಾಸ್ಕರ್‌ ಅವರನ್ನು ಮನೆಯಲ್ಲೇ ವಿಚಾರಣೆ ನಡೆಸಿದ್ದಾರೆ. ಬಳಿಕ ತಮ್ಮೊಂದಿಗೆ ಠಾಣೆಗೆ ಬರುವಂತೆ ಪೊಲೀಸರು ಸೂಚಿಸಿದ ವೇಳೆ, ಬುಧವಾರ ಬೆಳಗ್ಗೆ ವರೆಗೆ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಒಪ್ಪಿಗೆ ಸೂಚಿಸಿದ ಪೊಲೀಸರು, ತಡರಾತ್ರಿ 2 ಗಂಟೆಯಿಂದ ಬೆಳಗ್ಗೆ ವರೆಗೆ ಮನೆ ಬಳಿಯೇ ಕಾದು ನಿಂತಿದ್ದರು. ಬೆಳಗ್ಗೆ ಭಾಸ್ಕರ್‌ ಮನೆಯಿಂದ ಹೊರ ಬರುತ್ತಲೇ ಬಂಧಿಸಿದ್ದಾರೆ.

Comments are closed.