ಕರ್ನಾಟಕ

ಮಂತ್ರಿಗಿರಿ ತಪ್ಪಿದ್ದಕ್ಕಾಗಿ ಬಂಡೆದ್ದ 3 ಬಾರಿಯ ಕೈ ಶಾಸಕ ಎಂಟಿಬಿ ನಾಗರಾಜ್‌ 

Pinterest LinkedIn Tumblr


ಬೆಂಗಳೂರು: ಸಚಿವ ಸ್ಥಾನ ಕೈತಪ್ಪಿ ಹೋಗಿರುವ ಕಾರಣ ದಿಂದ ಹೊಸಕೋಟೆ ಕ್ಷೇತ್ರದ 3 ಬಾರಿಯ ಶಾಸಕ ಎಂಟಿಬಿ ನಾಗರಾಜ್‌ ಅವರು ಕಾಂಗ್ರೆಸ್‌ ನಾಯಕರ ವಿರುದ್ಧ ಬಂಡೆದ್ದಿದ್ದಾರೆ.

‘ನಾನು ಮೂರೂ ಬಾರಿ ಗೆದ್ದಿರುವುದು ಸ್ವಂತ ಶಕ್ತಿಯಿಂದ ಹೊರತು ಕಾಂಗ್ರೆಸ್‌ ಹೆಸರಿನಿಂದಲ್ಲ’ ಎಂದಿದ್ದಾರೆ.

35 ವರ್ಷಗಳಿಂದ ಪಕ್ಷಕ್ಕಾಗಿ ದುಡಿದು ಪ್ರಬಲ ಅಭ್ಯರ್ಥಿ ಬಚ್ಚೇಗೌಡರನ್ನು ಎದುರಿಸಿ ಗೆಲುವು ಸಾಧಿಸಿ ಶಾಸಕನಾಗಿದ್ದೇನೆ. 2 ಬಾರಿ ಗೆದ್ದವರಿಗೆ ಎರಡೆರಡು ಬಾರಿ ಸಚಿವರನ್ನಾಗಿ ಮಾಡಿದ್ದಾರೆ ನನ್ನನ್ನು ಯಾಕೆ ಪರಿಗಣಿಸಿಲ್ಲ ಎಂದು ಪ್ರಶ್ನಿಸಿದರು.

ನನ್ನ ಬೆಂಬಲಿಗರಾದ ಪಂಚಾಯತ್‌ ಸದಸ್ಯರು, ಜಿ.ಪಂ, ತಾ.ಪಂ ಸದಸ್ಯರು ರಾಜೀನಾಮೆ ಸಲ್ಲಿಸಲು ಮುಂದಾಗಿದ್ದಾರೆ ಎಂದರು.

ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಗೈರಾಗಿದ್ದ ಅವರು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರಾಗಿರುವ ಎಂಟಿಬಿ ನಾಗರಾಜ್‌ 470 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿದ್ದರು.

Comments are closed.