ರಾಷ್ಟ್ರೀಯ

ನಮಗೆ ಅಧಿಕಾರ ಕೊಟ್ಟರೆ 10 ದಿನದಲ್ಲಿ ರೈತರ ಸಾಲ ಮನ್ನಾ: ರಾಹುಲ್​ ಗಾಂಧಿ

Pinterest LinkedIn Tumblr


ನವದೆಹಲಿ: ಮುಂಬರುವ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಹತ್ತು ದಿನದೊಳಗೆ ರೈತರ ಸಾಲ ಮನ್ನಾ ಮಾಡುವುದಾಗಿ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರು ಭರವಸೆ ನೀಡಿದರು.

ಬುಧವಾರ ಮಧ್ಯಪ್ರದೇಶದ ಮಂದಸೂರಿನ ಪಿಪ್ಲಿಯಲ್ಲಿ ಗೋಲಿಬಾರ್​ನಲ್ಲಿ ಮೃತಪಟ್ಟ ರೈತರ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಿಜವೇನೆಂದರೆ ಪ್ರಧಾನಿ ಮೋದಿ ಹಾಗೂ ಬಿಜೆಪಿ ರೈತರ ಬಗ್ಗೆ ಕಾಳಜಿಯನ್ನು ಹೊಂದಿಲ್ಲ. ಸಿಎಂ ಶಿವರಾಜ್​ಸಿಂಗ್​ ಚೌಹಾನ್​ ನೇತೃತ್ವದ ಸರ್ಕಾರ ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಕಳೆದ ವರ್ಷ ರೈತರು ನಡೆಸಿದ್ದ ಪ್ರತಿಭಟನೆ ವೇಳೆ ಪೊಲೀಸರ ಗೋಲಿಬಾರ್​ನಲ್ಲಿ 6 ಮಂದಿ ಮೃತಪಟ್ಟಿದ್ದರು. ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ರೈತರ ವಿರುದ್ಧ ಕ್ರಮ ಕೈಗೊಂಡವರಿಗೆ ತಕ್ಕ ಶಿಕ್ಷೆ ಆಗುತ್ತದೆ ಎಂದು ಹೇಳಿದರು. ರೈತರ ಸ್ಮರಣಾರ್ಥದ ಜಾಥಾವನ್ನ ಕಾಂಗ್ರೆಸ್​ ಕಿಸಾನ್​ ಸಮೃದ್ಧಿ ಸಂಕಲ್ಪ ಜಾಥಾ ಅಂತಾ ಕರೆದಿದೆ.

Comments are closed.