ಕರ್ನಾಟಕ

ಕಾಲಾ ಸಿನಿಮಾದ ಕುರಿತು ವಿವಾದಾತ್ಮಕ ಟ್ವೀಟ್​ ಮಾಡಿದ ಪ್ರಕಾಶ್​ ರಾಜ್​ಗೆ ಸಾ.ರಾ. ಗೋವಿಂದು ಹೇಳಿದ್ದೇನು?

Pinterest LinkedIn Tumblr


ಬೆಂಗಳೂರು: ಕಾಲಾ ಸಿನಿಮಾದ ಕುರಿತು ವಿವಾದಾತ್ಮಕ ಟ್ವೀಟ್​ ಮಾಡಿರುವ ನಟ ಪ್ರಕಾಶ್​ ರಾಜ್​ಗೆ ಫಿಲಂ ಚೇಂಬರ್​ ಅಧ್ಯಕ್ಷ ಸಾ.ರಾ. ಗೋವಿಂದು ಅವರು ತಿರುಗೇಟು ನೀಡಿದ್ದಾರೆ. 2016ರಲ್ಲಿ ಕಾವೇರಿ ವಿವಾದ ಉಂಟಾದಾಗ ತಮಿಳುನಾಡಿನಲ್ಲಿ ನಾಗರಹಾವು ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತವಾಗಿತ್ತು. ಆಗ ಪ್ರಕಾಶ್​ ರಾಜ್​ ಎಲ್ಲಿ ಹೋಗಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಕಾಶ್ ರಾಜ್ ​ ಆಗಲಿ, ರಜನಿಕಾಂತ್​ ಆಗಲಿ ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ಹೇಳಿಕೆ ನೀಡುವಾಗ ಯೋಚಿಸಿ ಮಾತನಾಡಬೇಕು. ರಜನಿಕಾಂತ್​ ಪ್ರೀತಿಯಿಂದ ಮಾತನಾಡಬೇಕಿತ್ತು. ಆಗ ಕನ್ನಡಿಗರು ಅದನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಕಾವೇರಿ ನದಿ ನೀರು ಎರಡೂ ರಾಜ್ಯದವರಿಗೆ ಅನಿವಾರ್ಯ. ಹಾಗಾಗಿ ಪ್ರಕಾಶ್​ ರೈ ಮತ್ತು ರಜನಿಕಾಂತ್​ ಇಬ್ಬರೂ ಸೌಜನ್ಯದಿಂದ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದು ಹೇಳಬೇಕಿತ್ತು ಎಂದು ಸಾ.ರಾ. ಗೋವಿಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಜನಿಕಾಂತ್​ ಒಬ್ಬರ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಕಾಲ ಚಿತ್ರದ ಬಿಡುಗಡೆಗೆ ತಡೆಯೊಡ್ಡುವುದು ಎಷ್ಟು ಸರಿ ಎಂದು ಪ್ರಕಾಶ್​ ರಾಜ್​ ಟ್ವೀಟ್​ ಮಾಡಿ ಪ್ರಶ್ನಿಸಿದ್ದರು.

Comments are closed.