ಕರ್ನಾಟಕ

ಗಂಡ ಹೆಂಡತಿ ಬೆಡ್ ರೂಮ್ ವಿಡಿಯೋ ಮಾಡಿ ಸಿಕ್ಕಿ ಬಿದ್ದ ಯುವಕ ! ಮುಂದೆ ಏನಾಯಿತು…?

Pinterest LinkedIn Tumblr

ಬೆಳಗಾವಿ: ಯುವಕನೊಬ್ಬ ಗಂಡ ಹೆಂಡತಿ ಬೆಡ್ ರೂಮ್ ವಿಡಿಯೋ ಮಾಡಿದ ಘಟನೆ ಪೀರನವಾಡಿ ಗ್ರಾಮದಲ್ಲಿ ನಡೆದಿದೆ.

ಪೀರನವಾಡಿಯ ಬಾಡಿಗೆ ಮನೆಯಲ್ಲಿ ಪರುಶರಾಮ್ ಸಿಂಧೆ, ಪತ್ನಿ ಅನಿತಾ ಸಿಂಧೆ ವಾಸವಾಗಿದ್ದರು. ಒಂದು ತಿಂಗಳ ಹಿಂದೆ ಇವರಿಬ್ಬರ ಮದುವೆಯಾಗಿತ್ತು. ಪಕ್ಕದ ಮನೆಯ ನಿವಾಸಿ ಸುನೀಲ್ ವಡ್ಡರ ಎಂಬಾತ ಮನೆಯ ಕಿಟಕಿಯಲ್ಲಿ ಮೊಬೈಲ್ ಇಟ್ಟು ಶೂಟಿಂಗ್ ಮಾಡುತ್ತಿದ್ದ. ‌ ನಿನ್ನೆ ಸಪ್ಪಳವಾಗಿದ್ದನ್ನ ಗಮನಿಸಿ ಪರಶುರಾಮ್ ನೋಡಿದಾಗ ಮೊಬೈಲ್ ಇಟ್ಟಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಸುನೀಲ್ ತನ್ನ ಮೊಬೈಲ್ ನೀಡುವಂತೆ ಪರುಶರಾಮ್ ಗೆ ಕೇಳಿದ್ದಾನೆ. ಆದ್ರೆ ಸಂಶಯಗೊಂಡು ಪರುಶರಾಮ್ ಸುನೀಲ್ ಗೆ ಮೊಬೈಲ್ ಮರಳಿ ನೀಡಿಲ್ಲ.

ಇದೀಗ ಪರುಶರಾಮ್ ದಂಪತಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Comments are closed.