ಕರ್ನಾಟಕ

ಸಚಿವ ಸಂಪುಟ ಕಸರತ್ತು ಪೂರ್ಣ: ಬುಧವಾರ ಪ್ರಮಾಣವಚನ

Pinterest LinkedIn Tumblr


ಬೆಂಗಳೂರು: ಎಚ್​.ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಯಾರು ಮಂತ್ರಿಗಳಾಗಬೇಕು ಮತ್ತು ಯಾರಿಗೆ ಯಾವ ಖಾತೆ ನೀಡಬೇಕು ಎಂಬುದು ಬಹುತೇಕ ಅಂತಿಮಗೊಂಡಿದ್ದು, ಬುಧವಾರ ಪ್ರಮಾಣ ವಚನ ಸ್ವೀಕಾರ ನಡೆಯುವ ಸಾಧ್ಯತೆಗಳಿವೆ.

ಕಾಂಗ್ರೆಸ್​ ನಿಂದ 12 ಮತ್ತು ಜೆಡಿಎಸ್​ನಿಂದ 8 ಮಂದಿ ಸೇರಿದಂತೆ ಒಟ್ಟು 20 ಮಂದಿ ಸಚಿವರು ಮೊದಲ ಹಂತದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮಿಕ್ಕ ಸ್ಥಾನಗಳನ್ನು ಮುನ್ನೆಚ್ಚರಿಕೆ ದೃಷ್ಟಿಯಿಂದ ಖಾಲಿ ಇರಿಸಿಕೊಳ್ಳಲು ಎರಡೂ ಪಕ್ಷಗಳು ನಿರ್ಧರಿಸಿವೆ ಎನ್ನಲಾಗಿದೆ.
ಸಚಿವರ ಪ್ರಮಾಣ ವಚನಕ್ಕೆ ಅವಕಾಶ ಕೋರಲು ಸಿಎಂ ಎಚ್​.ಡಿ ಕುಮಾರಸ್ವಾಮಿ ಅವರು ಇಂದು ರಾಜ್ಯಪಾಲರನ್ನು ಭೇಟಿಯಾಗುವ ಸಾಧ್ಯತೆಗಳಿವೆ.

ಸಂಭಾವ್ಯ ಸಚಿವರು
ಕಾಂಗ್ರೆಸ್​: ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್, ಎಂ.ಕೃಷ್ಣಪ್ಪ, ಕೃಷ್ಣಬೈರೇಗೌಡ, ರಾಮಲಿಂಗಾರೆಡ್ಡಿ, ರೂಪಾ ಶಶಿಧರ್, ಶಾಮನೂರು ಶಿವಶಂಕರಪ್ಪ, ಎಂ.ಬಿ.ಪಾಟೀಲ್, ಡಾ.ಸುಧಾಕರ್, ಜಮೀರ್ ಅಹಮದ್, ಶಂಕರ್, ನಾಗೇಶ್, ದಿನೇಶ್ ಗುಂಡೂರಾವ್.

ಜೆಡಿಎಸ್​​: ಎಚ್​​.ಡಿ.ರೇವಣ್ಣ, ವೆಂಕಟರಾವ್​ ನಾಡಗೌಡ, ಸಾ.ರಾ.ಮಹೇಶ್, ಬಿ.ಎಂ.ಫರೂಕ್, ಬಂಡೆಪ್ಪ ಕಾಶಂಪುರ, ಎನ್​​.ಮಹೇಶ್, ಪುಟ್ಟರಾಜು, ಎಚ್​​.ಕೆ.ಕುಮಾರಸ್ವಾಮಿ.

Comments are closed.