ಕರ್ನಾಟಕ

ಅನೈತಿಕ ಸಂಬಂಧ ಶಂಕೆ: ಪತಿಯಿಂದ ಪತ್ನಿ ಮೇಲೆ ಮನಸೋ ಇಚ್ಚೆ ಮಚ್ಚಿನಿಂದ ಕಡಿದು ಹಲ್ಲೆ

Pinterest LinkedIn Tumblr


ಚಿಕ್ಕಬಳ್ಳಾಪುರ: ಪತ್ನಿ ಬೇರೊಬ್ಬನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಶಂಕಿಸಿದ ಗಂಡ, ತನ್ನ ಪತ್ನಿ ಮೇಲೆ ಮನಸೋ ಇಚ್ಚೆ ಮಚ್ಚಿನಿಂದ ಕಡಿದಿರುವ ಘಟನೆ ಗೌರಿಬಿದನೂರಿನಲ್ಲಿ ಶನಿವಾರ ನಡೆದಿದೆ.

ಗೌರಿಬಿದನೂರಿನ ಹೊನ್ನಪ್ಪಹಳ್ಳಿಯ ನರಸಿಂಹ ಮೂರ್ತಿ ತನ್ನ 2ನೇ ಪತ್ನಿ ನೀಲಮ್ಮ(25)ಳನ್ನು ಅನುಮಾನಿಸಿ, ಮಚ್ಚಿನಿಂದ ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾನೆ.

ಹೊನ್ನಪ್ಪನಹಳ್ಳಿ ಗ್ರಾಮದಲ್ಲಿ ನೆಲೆಸಿದ್ದ ನರಸಿಂಹ ಮೂರ್ತಿ, ನಾಗಮಣಿ ಎಂಬಾಕೆಯನ್ನು ಮದುವೆಯಾಗಿದ್ದ. ಬಳಿಕ ಆಕೆಯಿಂದ ದೂರವಾಗಿ ನೀಲಮ್ಮಳನ್ನು ಮದುವೆ ಮಾಡಿಕೊಂಡಿದ್ದ. ನೀಲಮ್ಮ ಬೇರೊಬ್ಬರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಆರೋಪಿಸಿ, ಹಲ್ಲೆ ನಡೆಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ನೀಲಮ್ಮಳಿಗೆ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಿಲಾಗಿದೆ ಎಂದು ತಿಳಿದು ಬಂದಿದೆ.

ನೀಲಮ್ಮಳ ಕೈ ಹಾಗೂ ಕಾಲುಗಳಿಗೆ ಗಂಭೀರ ಗಾಯಗಳಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಘಟನೆ ಬಳಿಕ ನರಸಿಂಹ ಮೂರ್ತಿ ನೇರ ಮಂಚೇನಹಳ್ಳಿ ಠಾಣೆಗೆ ತೆರಳಿ ಶರಣಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Comments are closed.