ಕರ್ನಾಟಕ

ಸಿಇಟಿ ಫಲಿತಾಂಶ ಪ್ರಕಟ; ಎಂಜಿನಿಯರಿಂಗ್‍ನಲ್ಲಿ ಶ್ರೀಧರ್ ಪ್ರಥಮ, ನಾರಾಯಣ ಪೈ ದ್ವಿತೀಯ ರ‍್ಯಾಂಕ್‌

Pinterest LinkedIn Tumblr

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯ ಫಲಿತಾಂಶ ಪ್ರಕಟಿಸಿದ್ದು, ಬಿಇಯಲ್ಲಿ ವಿಜಯಪುರದ ಶ್ರೀಧರ್ ದೊಡ್ಡಮನಿ ಪ್ರಥಮ ರಾಂಕ್ ಪಡೆದಿದ್ದಾರೆ.

ಎಂಜಿನಿಯರಿಂಗ್‍ನಲ್ಲಿ ಶ್ರೀಧರ್ ದೊಡ್ಡಮನಿ (ಎಕ್ಸಲೆಂಟ್ ಪಿಯು ಸಯನ್ಸ್ ಕಾಲೇಜ್, ವಿಜಯಪುರ ) ಪ್ರಥಮ, ನಾರಾಯಣ ಪೈ (ಶಾರದ ಇಂಡಿಪೆಂಡೆಂಟ್ ಪಿಯು ಕಾಲೇಜು, ದಕ್ಷಿಣ ಕನ್ನಡ) ದ್ವಿತೀಯ ರ‍್ಯಾಂಕ್‌ ಗಳಿಸಿದ್ದಾರೆ.

ದೇಬರ್ಶೋ ಸನ್ಯಾಸಿ (ಜಿಂದಾಲ್ ವಿದ್ಯಾ ಮಂದಿರ್, ಬಳ್ಳಾರಿ ) ತೃತೀಯ, ತುಹಿನ್ ಗಿರಿನಾಥ್ (ನಾರಾಯಣ ಇ ಟೆಕ್ನೊ ಸ್ಕೂಲ್, ಕುಂದಾಪುರ) ನಾಲ್ಕನೇ ರ‍್ಯಾಂಕ್‌ ಹಾಗೂ ಅನಿತಾ ಜೇಮ್ಸ್ ( ನ್ಯಾಷನಲ್ ಪಬ್ಲಿಕ್ ಸ್ಕೂಲ್ , ಇಂದಿರಾನಗರ) ಐದನೇ ರ‍್ಯಾಂಕ್‌ ಗಳಿಸಿದ್ದಾರೆ.

ಬಿಎಸ್ಸಿ (ಅಗ್ರಿ)

ಶ್ರೀಧರ್ ದೊಡ್ಡಮನಿ p-ಎಕ್ಸಲೆಂಟ್ ಪಿಯು ಸಯನ್ಸ್ ಕಾಲೇಜ್, ವಿಜಯಪುರ
ಸಾಯಿಕುಮಾರ್ ಆರ್ ಸಾದುನವರ್ -ಚೇತನ್ ಇಂಡಿಪೆಂಡೆಂಟ್ ಪಿಯು ಕಾಲೇಜ್ ಹುಬ್ಬಳ್ಳಿ
ಮಹಿಮಾ ಕೃಷ್ಣಾ-ವಿವಿಎಸ್ ಸರ್ದಾರ್ ಪಟೇಲ್ ಪಿಯು ಕಾಲೇಜ್ , ಬೆಂಗಳೂರು
ಎಸ್ ಆರ್ ಅಪರೂಪ -ಸಂಕಲ್ಪ ಪಿಯು ಕಾಲೇಜ್, ಬಳ್ಳಾರಿ
ಶ್ರೇಯಸ್ ಎಸ್-ಪ್ರೆಸಿಡೆನ್ಸಿ ಪಿಯು ಕಾಲೇಜ್, ತುಮಕೂರು

ಬಿವಿಎಸ್‍ಸಿ

ವಿನೀತ್ ಮೇಗುರ್-ಎಕ್ಸ್ ಪರ್ಟ್ ಪಿಯು ಕಾಲೇಜ್, ವಲಚ್ಚಿಲ್, ಮಂಗಳೂರು
ಎಸ್ ಆರ್ ಅಪರೂಪ-ಸಂಕಲ್ಪ ಪಿಯು ಕಾಲೇಜ್, ಬಳ್ಳಾರಿ
ಆದಿತ್ಯ ಚಿದಾನಂದ ಈಶ್ವರಲಾ-ಶ್ರೀ ಕುಮಾರನ್ ಚಿಲ್ಡ್ರನ್ಸ್ ಹೋಮ್, ಬೆಂಗಳೂರು
ವೈಷ್ಣವಿ ಪಿ.ಜೆ -ಎಕ್ಸ್ ಪರ್ಟ್ ಪಿಯು ಕಾಲೇಜ್, ವಲಚ್ಚಿಲ್, ಮಂಗಳೂರು
ಶ್ರೇಯಸ್ . ಎಸ್-ಪ್ರೆಸಿಡೆನ್ಸಿ ಪಿಯು ಕಾಲೇಜ್, ತುಮಕೂರು

ಬಿ ಫಾರ್ಮಾ/ ಫಾರ್ಮಾ ಡಿ

ತುಹಿನ್ ಗಿರಿನಾಥ್-ನಾರಾಯಣ ಇ ಟೆಕ್ನೊ ಸ್ಕೂಲ್, ಕುಂದಾಪುರ
ಅನಿತಾ ಜೇಮ್ಸ್-ನ್ಯಾಷನಲ್ ಪಬ್ಲಿಕ್ ಸ್ಕೂಲ್ , ಇಂದಿರಾನಗರ
ಯೋಗೇಶ್ ಮಾಧವ ರೆಡ್ಡಿ-ನಾರಾಯಣ ಇ ಟೆಕ್ನೊ ಸ್ಕೂಲ್, ಕುಂದಾಪುರ
ದೇಬರ್ಶೋ ಸನ್ಯಾಸಿ -ಜಿಂದಾಲ್ ವಿದ್ಯಾ ಮಂದಿರ್, ಬಳ್ಳಾರಿ
ನಾರಾಯಣ ಪೈ-ಶಾರದ ಇಂಡಿಪೆಂಡೆಂಟ್ ಪಿಯು ಕಾಲೇಜು, ದಕ್ಷಿಣ ಕನ್ನಡ
ಮಧ್ಯಾಹ್ನ 1 ಗಂಟೆಗೆ ಫಲಿತಾಂಶ ಬಿಡುಗಡೆಯಾಗಿದ್ದು 3ಗಂಟೆಗೆ ವೆಬ್‌ಸೈಟ್‌ಗಳಲ್ಲಿ ಲಭ್ಯವಾಗಲಿದೆ.

ಫಲಿತಾಂಶಕ್ಕಾಗಿ ವೀಕ್ಷಿಸಬೇಕಾದ ವೆಬ್‌ಸೈಟ್‌ಗಳು:
http://kea.kar.nic.in
http://cet.kar.nic.in
http://karresults.nic.in

Comments are closed.