ಕರ್ನಾಟಕ

ಡಿ.ಕೆ.ಶಿವಕುಮಾರ್ -ಡಿ.ಕೆ.ಸುರೇಶ್ ಸಹೋದರರ 11 ಆಪ್ತರ ಮನೆ ಮೇಲೆ ಸಿಬಿಐ ದಾಳಿ

Pinterest LinkedIn Tumblr

ಬೆಂಗಳೂರು: ಕನಕಪುರ ಕ್ಷೇತ್ರದ ಶಾಸಕ ಡಿ.ಕೆ.ಶಿವಕುಮಾರ್ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಅವರ 11 ಆಪ್ತರ ಮನೆಗಳ ಮೇಲೆ ಸಿಬಿಐ ಇಂದು (ಗುರುವಾರ) ದಾಳಿ ನಡೆಸಿದೆ.

ಕೇಂದ್ರ ಸರ್ಕಾರ ನಮ್ಮ ವಿರುದ್ಧ ಸಂಚು ಹೂಡಿದೆ, 11 ಮಂದಿ ನಮ್ಮ ಆಪ್ತರ ಮನೆ ಮೇಲೆ ಸರ್ಚ್‌ ವಾರಂಟ್‌ ಹೊರಡಿಸಲಾಗಿದೆ ಎಂದು ಕಾಂಗ್ರೆಸ್‌ ನಾಯಕ ಡಿ.ಕೆ.ಶಿಕುಮಾರ್‌ ಮತ್ತು ಸಂಸದ ಡಿ.ಕೆ.ಸುರೇಶ್‌ ಅವರು ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದ ಬೆನ್ನಲ್ಲೇ ಸಿಬಿಐ ಅಧಿಕಾರಿಗಳು ದಾಳಿ ನಡೆದಿದೆ.

ಡಿ.ಕೆ.ಶಿವಕುಮಾರ್‌ ಅವರ ಕೆಲ ವ್ಯವಹಾರದ ಪಾಲುದಾರರ ನಿವಾಸಗಳ ಮೇಲೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿರುವ ಕುರಿತು ವರದಿಯಾಗಿದೆ. ಬುಧವಾರ ಸಿಬಿಐ 11 ಮಂದಿಯ ವಿರುದ್ಧ ಕೋರ್ಟ್‌ನಲ್ಲಿ ಸರ್ಚ್‌ ವಾರೆಂಟ್‌ ಪಡೆದಿತ್ತು.

ಗುರುವಾರ ಬೆಳ್ಳಂಬೆಳಗ್ಗೆ ಡಿ.ಕೆ.ಶಿವಕುಮಾರ್‌ ಅವರು ಸಹೋದರ ಸುರೇಶ್‌ ಜೊತೆ ತುರ್ತು ಸುದ್ದಿಗೋಷ್ಠಿ ನಡೆಸಿ ದಾಳಿ ನಡೆಯುವ ಬಗ್ಗೆ ನಮಗೆ ಮಾಹಿತಿ ದೊರಕಿದೆ, ಇದಕ್ಕೆ ನಾವು ಜಗ್ಗುವುದಿಲ್ಲ ಎಂದು ಹೇಳಿಕೆ ನೀಡಿದ್ದರು.

Comments are closed.