ಕರ್ನಾಟಕ

ವಿದೇಶದಲ್ಲಿದ್ದರೂ ಅಲ್ಲಿಂದಲೇ ನಮಗೆ ಮನೋರಂಜನೆ ಒದಗಿಸುವಿರೆಂದು ಹಾರೈಸುತ್ತೇವೆ: ರಾಹುಲ್‌ಗೆ ಬಿಜೆಪಿ ಟ್ರೋಲ್‌ ಆರ್ಮಿ

Pinterest LinkedIn Tumblr


ಹೊಸದಿಲ್ಲಿ : “ಯುಪಿಎ ಮುಖ್ಯಸ್ಥೆಯಾಗಿರುವ ತಾಯಿ ಸೋನಿಯಾ ಗಾಂಧಿ ಅವರ ವೈದ್ಯಕೀಯ ತಪಾಸಣೆಗಾಗಿ ನಾನು ಆಕೆಯ ಸಂಗಡ ಕೆಲವು ದಿನಗಳ ಮಟ್ಟಿಗೆ ವಿದೇಶಕ್ಕೆ ಹೋಗುತ್ತಿದ್ದೇನೆ; ಈ ಸಂದರ್ಭದಲ್ಲಿ ನನ್ನ ಅನುಪಸ್ಥಿತಿಯಲ್ಲಿ ಟ್ವಿಟರ್‌ನಲ್ಲಿ ಸಿಕ್ಕಾಪಟ್ಟೆ ವ್ಯಸ್ತರಾಗಿರಬೇಡಿ’ ಎಂದು ಬಿಜೆಪಿಯ ಸಾಮಾಜಿಕ ಮಾಧ್ಯಮ ಟ್ರೋಲ್‌ ಆರ್ಮಿ ವಿರುದ್ಧ ಕಳೆದ ಶನಿವಾರದ ತನ್ನ ಟ್ವಿಟರ್‌ ಬರಹದಲ್ಲಿ ಕಟಕಿಯಾಡಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಬಿಜೆಪಿ ತಕ್ಕುದಾದ ಉತ್ತರವನ್ನೇ ನೀಡಿದೆ.

“ನೀವು ವಿದೇಶದಲ್ಲಿದ್ದರೂ ಅಲ್ಲಿಂದಲೇ ನಮಗೆ ಮನೋರಂಜನೆ ಒದಗಿಸುವಿರೆಂದು ನಾವು ಹಾರೈಸುತ್ತೇವೆ. ಅಂತೆಯೇ ಸೋನಿಯಾ ಜೀ ಅವರ ಆರೋಗ್ಯ ಚೆನ್ನಾಗಿರಲೆಂದೂ ನಾವು ಹಾರೈಸುತ್ತೇವೆ’ ಎಂದು ಬಿಜೆಪಿ, ರಾಹುಲ್‌ ಗಾಂಧಿಗೆ ಟ್ವಿಟರ್‌ ಮೂಲಕ ಉತ್ತರಿಸಿದೆ.

“ನೀವು ವಿದೇಶಕ್ಕೆ ಹಾರುವ ಮುನ್ನ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಮಾಡುವಿರಾ?’ಎಂಬ ಪ್ರಶ್ನೆಯನ್ನೂ ಬಿಜೆಪಿ ಕೇಳಿದೆ.

“ಕರ್ನಾಟಕದ ಮಹಿಳೆಯರು ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುವುದನ್ನೇ ಕಾಯುತ್ತಿದ್ದಾರೆ. ನೀವು ವಿದೇಶಕ್ಕೆ ಹೋಗುವ ಮುನ್ನ ಸಚಿವ ಸಂಪುಟ ವಿಸ್ತರಣೆ ಆಯಿತೆಂದರೆ, ಅದು ಕಾರ್ಯೋನ್ಮುಖವಾದೀತು ಎಂದವರು ಹಾರೈಸುತ್ತಾರೆ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ರಾಹುಲ್‌ ಗಾಂಧಿ ಅವರು ನಿನ್ನೆ ಭಾನುವಾರ ರಾತ್ರಿ ತಾಯಿ ಸೋನಿಯಾ ಗಾಂಧಿ ಸಂಗಡ, ಆಕೆಯ ವೈದ್ಯಕೀಯ ತಪಾಸಣೆಗಾಗಿ, ವಿದೇಶಕ್ಕೆ ಪ್ರಯಾಣ ಬೆಳೆಸಿದರು. 2011ರಲ್ಲಿ ಆಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು.

ಈಗಿನ್ನು ರಾಹುಲ್‌ ಒಂದು ವಾರದೊಳಗೆ ಸ್ವದೇಶಕ್ಕೆ ಮರಳುವರಾದರೂ ಸೋನಿಯಾ ತನ್ನ ವಿದೇಶ ವಾಸ್ತವ್ಯವನ್ನುದೀರ್ಘಾವಧಿಗೆ ಮುಂದುವರಿಸಲಿದ್ದಾರೆ.

Comments are closed.