ಕರ್ನಾಟಕ

ನಟ ಶಿವರಾಜ್‍ಕುಮಾರ್ ದಂಪತಿಯಿಂದ ಮುಖ್ಯಮಂತ್ರಿ ಕುಮಾರಸ್ವಾಮಿಯ ಭೇಟಿ !

Pinterest LinkedIn Tumblr

ಬೆಂಗಳೂರು: ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೊ ಶಿವರಾಜ್‍ಕುಮಾರ್ ದಂಪತಿ ಇಂದು ರಾಜ್ಯದ ನೂತನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾದರು.

ಕುಮಾರಸ್ವಾಮಿ ಅವರಿಗೆ ಶುಭ ಹಾರೈಸಲು ಬಂದಿದ್ದ ಶಿವರಾಜ್‍ಕುಮಾರ್ ಸುದ್ದಿಗಾರರೊಡನೆ ಮಾತನಾಡಿ “ಮುಖ್ಯಮಂತ್ರಿಗಳಿಗೆ ಶುಭ ಹಾರೈಸಲು ಬಂದಿದ್ದೆ, ಇದರಲ್ಲಿ ಯಾವ ರಾಜಕೀಯ ಇಲ್ಲ. ಚಲನಚಿತ್ರ ನಿರ್ಮಾಣ, ಹಿನ್ನೆಲೆಯಿಂದ ಬಂದ ಇವರು ಎರಡನೇ ಬಾರಿಗೆ ರಾಜ್ಯದ ಮುಖ್ಯಮ್ಮಂತ್ರಿಗಳಾಗಿದ್ದಾರೆ. ನಮ್ಮ ಹಾಗೂ ದೇವೇಗೌಡರ ಕುಟುಂಬದ ನಂಟು ಬಹಳ ಹಳೆಯದು” ಎಂದರು.

“ಚಿತ್ರೀಕರಣ ದಲ್ಲಿದ್ದ ಕಾರಣ ಅವರ ಭೇಟಿ ಮಾಡಲಾಗಲಿಲ್ಲ. ಹೀಗಾಗಿ ಇಂದು ಆಗಮಿಸಿದ್ದೆವು.ರಾಜ್ಯದ ಜನತೆ ಪರ ಕಾಳಜಿ ಇರುವ ವ್ಯಕ್ತಿ ಮುಖ್ಯಮಂತ್ರಿಯಾಗಿದ್ದಾರೆ. ಅವರು ಆ ನಿಟ್ಟಿನಲ್ಲಿ ಕೆಲಸ ಮಾಡಲಿ” ಶಿವರಾಜ್‍ಕುಮಾರ್ ಹೇಳಿದರು.

ಲೋಕಸಭಾ ಚುನಾವಣೆಗೆ ಶಿವರಾಜ್‍ಕುಮಾರ್ ಪತ್ನಿ ಗೀತಾ ಸ್ಪರ್ಧೆ ಸಂಬಂಧ ಮಾತನಾಡಿದ ನಟ “ಅದು ಇನ್ನೂ ಬಹಳ ದೂರವಿದೆ, ನಾನು ಈ ಕುರಿತು ಈಗೇನೂ ಹೇಳಲಾಗುವುದಿಲ್ಲ” ಎಂದರು.

Comments are closed.