ಕರ್ನಾಟಕ

ಸರ್ಕಾರಿ ಕಾರನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಬೇಡ ಎಂದಿದ್ದೇಕೆ?

Pinterest LinkedIn Tumblr


ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಸರ್ಕಾರಿ ಕಾರು ಬಳಸದಿರಲು ನಿರ್ಧರಿಸಿದ್ದಾರೆ. ಚುನಾವಣೆ ಫಲಿತಾಂಶ ಬಂದಾಗಿನಿಂದ ಬಳಸುತ್ತಿರುವ ನೀಲಿ ಬಣ್ಣದ ರೇಂಜ್​ ರೋವರ್​ ಕಾರನ್ನೇ ಅವರು ಉಪಯೋಗಿಸಲು ತೀರ್ಮಾನಿಸಿದ್ದಾರೆ.

ಫಲಿತಾಂಶ ಬರುವ ಹಿಂದಿನ ದಿನದವರೆಗೆ ಎಚ್​.ಡಿ. ಕುಮಾರಸ್ವಾಮಿ ಅವರು ಬಿಳಿ ಬಣ್ಣದ ಟೊಯೋಟಾ ಫಾರ್ಚುನರ್​ ಕಾರು ಬಳಸುತ್ತಿದ್ದರು. ಫಲಿತಾಂಶ ಪ್ರಕಟವಾದ ದಿನ ಮಧ್ಯಾಹ್ನ ಮೈತ್ರಿ ಸರ್ಕಾರ ರಚನೆ ಬಗ್ಗೆ ಚರ್ಚಿಸಲು ಎಚ್​.ಡಿ. ದೇವೇಗೌಡರ ನಿವಾಸಕ್ಕೆ 0002 ನಂಬರ್​ನ ರೇಂಜ್​ ರೋವರ್​ ಕಾರು ಕೊಂಡೊಯ್ದಿದ್ದ ಕುಮಾರಸ್ವಾಮಿ ಅವರು, ಅಂದಿನಿಂದ ಇಲ್ಲಿ ವರೆಗೆ ಅದೇ ಕಾರನ್ನೇ ಬಳಸುತ್ತಿದ್ದಾರೆ.

ಹೀಗಿರುವಾಗಲೇ ಡಿಪಿಎಆರ್​ ಇಲಾಖೆಯಿಂದ ಕಾರು ನೀಡಿದರೂ ಬಳಸಲು ನಿರಾಕರಿಸಿರುವ ಕುಮಾರಸ್ವಾಮಿ ಅವರು ಸರ್ಕಾರಿ ವಾಹನ ಬೇಡ ಎಂದು ಮೌಖಿಕವಾಗಿ ತಿಳಿಸಿದ್ದಾರೆ.

0002 ನಂಬರ್​ನ ನೀಲಿ ಬಣ್ಣದ ರೇಂಜ್ ರೋವರ್ ಕಾರ್ ಬಳಸಲು ಆರಂಭಿಸಿದ ಮೇಲೆ ಕುಮಾರಸ್ವಾಮಿ ಅವರಿಗೆ ಯಶಸ್ಸು ಸಿಕ್ಕಿದೆ ಎನ್ನಲಾಗಿದ್ದು, ಮುಂದೆಯೂ ಅದೇ ಕಾರನ್ನು ಉಪಯೋಗಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

Comments are closed.