ಕರ್ನಾಟಕ

ಸಚಿವರ ಪಟ್ಟಿ ಕುರಿತು ಚರ್ಚೆಗಾಗಿ ದಿಲ್ಲಿಗೆ ಹೋದ ಕಾಂಗ್ರೆಸ್​ ನಾಯಕರು

Pinterest LinkedIn Tumblr


ಬೆಂಗಳೂರು: ಸಂಪುಟ ರಚನೆ ಹಾಗೂ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ಹೈಕಮಾಂಡ್ ಜತೆ ಚರ್ಚಿಸಲು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಶನಿವಾರ ದೆಹಲಿಗೆ ತೆರಳಿದರು.

ಸಿದ್ದರಾಮಯ್ಯ ಅವರ ಜತೆ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ, ಡಿ.ಕೆ.ಶಿವಕುಮಾರ್ ಅವರೂ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದರು.

ಜೆಡಿಎಸ್​-ಕಾಂಗ್ರೆಸ್​ ಸರ್ಕಾರ ವಿಶ್ವಾಸಮತ ಸಾಬೀತುಪಡಿಸಿದ ಬೆನ್ನಲ್ಲೇ ಸಂಪುಟ ರಚನೆಯ ಕಸರತ್ತು ಆರಂಭವಾಗಿದ್ದು, ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು? ಯಾರಿಗೆ ಯಾವ ಖಾತೆ ನೀಡಬೇಕು? ಮೈತ್ರಿ ಪಕ್ಷಕ್ಕೆ ಯಾವ ಇಲಾಖೆಗಳನ್ನು ನೀಡಬೇಕು ಎಂಬುದರ ಕುರಿತು ನಾಯಕರು ದೆಹಲಿಯಲ್ಲಿ ಹೈಕಮಾಂಡ್​ನೊಂದಿಗೆ ಚರ್ಚಿಸಲಿದ್ದಾರೆ.

ಇನ್ನು, ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕುರಿತು ಇದೇ ವೇಳೆ ಚರ್ಚೆಯಾಗುವ ಸಾಧ್ಯಗಳಿವೆ ಎನ್ನಲಾಗಿದೆ. ವಿಧಾನಸಭೆಯಲ್ಲಿ ಗಳಿಸಿರುವ ಸ್ಥಾನಗಳ ಆಧಾರದಲ್ಲಿ ಕಾಂಗ್ರೆಸ್​ಗೆ ಈ ಬಾರಿ 4 ಪರಿಷತ್​ ಸ್ಥಾನಗಳು ಪ್ರಾಪ್ತವಾಗಿವೆ. ಅದಕ್ಕೆ, ವಿ.ಆರ್. ಸುದರ್ಶನ್, ರಾಮಚಂದ್ರಪ್ಪ, ನಾಗರಾಜ ಯಾಧವ್, ಹುಚ್ಚಪ್ಪ, ನಂಜಯನಮಠ, ಕಮಲಾಕ್ಷಿರಾಜಣ್ಣ, ರಾಣಿ ಸತೀಶ್, ಬ್ಯಾಡಗಿ ಶಿವಣ್ಣನವರ್, ನಿವೇದಿತಾ ಆಳ್ವಾ ಆಕಾಂಕ್ಷಿಗಳಾಗಿದ್ದಾರೆ.

ವಿಧಾನಸಭೆ ಸ್ಥಾನ ಗಳಿಕೆ ಆಧಾರದಲ್ಲಿ ಬಿಜೆಪಿ-5, ಕಾಂಗ್ರೆಸ್-4, ಜೆಡಿಎಸ್-2 ಸ್ಥಾನಗಳನ್ನು ನಿರಾಯಾಸವಾಗಿ ಗೆಲ್ಲಬಹುದಾಗಿದೆ.

Comments are closed.