ಕರ್ನಾಟಕ

ಹೋಟೆಲ್ ನಿಂದ ಕ್ಷೇತ್ರದತ್ತ ತೆರಳಿದ ಶಾಸಕರು!

Pinterest LinkedIn Tumblr


ಬೆಂಗಳೂರು: ಚುನಾವಣೆ ಫಲಿತಾಂಶ ಬಂದ ಬಳಿಕ ಕಳೆದ ಹತ್ತು ದಿನಗಳಿಂದ ಕ್ಷೇತ್ರದತ್ತ ಮುಖ ಮಾಡದಿದ್ದ ಕಾಂಗ್ರೆಸ್ ಶಾಸಕರು ಶುಕ್ರವಾರ ಬಹುಮತ ಸಾಬೀತಿನ ನಂತರ ಹಿಲ್ಟನ್ ಹೋಟೆಲ್ ನಿಂದ ಸ್ವ ಕ್ಷೇತ್ರದತ್ತ ತೆರಳುತ್ತಿದ್ದಾರೆ. ಮತ್ತೊಂದೆಡೆ ಸಂಪುಟ ವಿಸ್ತರಣೆಗಾಗಿ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸಮಾಲೋಚನೆ ನಡೆಸಿದ್ದಾರೆ.

ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯ ಬಳಿಕ ನಿಟ್ಟುಸಿರು ಬಿಟ್ಟ ಕಾಂಗ್ರೆಸ್ ಶಾಸಕರು ಹಿಲ್ಟನ್ ಹೋಟೆಲ್ ಖಾಲಿ ಮಾಡಿ ತಮ್ಮ, ತಮ್ಮ ಸ್ವ ಕ್ಷೇತ್ರದತ್ತ ತೆರಳುತ್ತಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಬಹುಮತ ಸಾಬೀತಿನ ಬೆನ್ನಲ್ಲೇ ಸಂಪುಟ ವಿಸ್ತರಣೆ ಕಸರತ್ತು:

ಸಂಪುಟ ವಿಸ್ತರಣೆಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ಕೆಸಿ ವೇಣುಗೋಪಾಲ್, ಎಚ್ ಡಿ ರೇವಣ್ಣ ಅವರ ಜತೆ ಸಿಎಂ ಕುಮಾರಸ್ವಾಮಿ ಚರ್ಚೆ ನಡೆಸುತ್ತಿದ್ದಾರೆ. ಈ ಸಮಾಲೋಚನೆಯ ನಂತರ ಕಾಂಗ್ರೆಸ್ ಮುಖಂಡರು ದೆಹಲಿಗೆ ತೆರಳಲಿದ್ದಾರೆ ಎಂದು ವರದಿ ವಿವರಿಸಿದೆ.

Comments are closed.