ಕರ್ನಾಟಕ

ಮನೆಕೆಲಸ ಮಾಡಿದ್ದ 16 ವರ್ಷದ ಬಾಲಕಿ ಸಂಬಳ ಕೇಳಿದ್ದಕ್ಕೆ ಕೊಲೆ!

Pinterest LinkedIn Tumblr


ನವದೆಹಲಿ: ಮನೆಕೆಲಸ ಮಾಡಿದ್ದ 16 ವರ್ಷದ ಬಾಲಕಿ ಸಂಬಳ ಕೇಳಿದ್ದಕ್ಕೆ ಕೊಲೆ ಮಾಡಿ, ದೇಹವನ್ನು ತುಂಡರಿಸಿರುವ ಘಟನೆ ನಡೆದಿದೆ.

ದೆಹಲಿಯಲ್ಲಿ ವ್ಯಕ್ತಿಯೊಬ್ಬ ಮನೆ ಕೆಲಸಕ್ಕಾಗಿ ಬಾಲಕಿಯನ್ನು ಬಳಸಿಕೊಂಡಿದ್ದಾನೆ. ನಂತರ ಆಕೆ ಸಂಬಳಕ್ಕಾಗಿ ಒತ್ತಾಯಿಸಿದಾಗ ಆಕೆಯನ್ನು ಕೊಲೆ ಮಾಡಿ ದೇಹವನ್ನು ಮೂರು ಭಾಗಗಳನ್ನಾಗಿ ಕತ್ತರಿಸಿ ಚರಂಡಿಗೆ ಎಸೆದಿದ್ದಾನೆ.

ಬಾಲಕಿಯ ಮೃತದೇಹ ಮೇ 4 ರಂದು ಪತ್ತೆಯಾಗಿದ್ದು, ಅದಕ್ಕೂ ಒಂದು ದಿನ ಮುಂಚಿತವಾಗಿ ಆರೋಪಿ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಂತರ ಪರಾರಿಯಾಗಿದ್ದ ಆರೋಪಿ ಮನ್‌ಜೀತ್‌ ಕರ್ಕೆತಾನನ್ನು ಮೇ 17 ರಂದು ಬಂಧಿಸಲಾಗಿದೆ. ಬಾಲಕಿಯ ಕೊಲೆಗೆ ಓರ್ವ ಮಹಿಳೆ ಸೇರಿ ಮತ್ತಿಬ್ಬರ ಸಹಾಯ ಪಡೆದುಕೊಂಡಿರುವುದಾಗಿ ವಿಚಾರಣೆ ವೇಳೆ ಆರೋಪಿ ತಿಳಿಸಿದ್ದಾನೆ.

ಜಾರ್ಖಂಡ್‌ ಮೂಲದ ಬಾಲಕಿಯನ್ನು ಆಕರ್ಷಕ ಸಂಬಳ ಕೊಡಿಸುವ ನೆಪದಲ್ಲಿ ದೆಹಲಿಗೆ ಕರೆತರಲಾಗಿತ್ತು. ಕಳೆದ ಮೂರು ವರ್ಷಗಳಿಂದಲೂ ಆಕೆಯನ್ನು ಮನೆಕೆಲಸಕ್ಕಾಗಿ ಇತರೆಡೆ ನೇಮಿಸಲಾಗಿತ್ತು. ಆದರೆ ಆಕೆಯ ಸಂಬಳವನ್ನು ಆರೋಪಿಗಳೇ ಬಳಸಿಕೊಳ್ಳುತ್ತಿದ್ದರು. ಅದಾದ ಒಂದು ವರ್ಷದ ನಂತರ ಕೆಲಸ ಬಿಟ್ಟ ಆಕೆ ಮೇ 3 ರಂದು ಕರ್ಕೆತಾ ಮನೆಗೆ ಬಂದು ಸಂಬಳಕ್ಕಾಗಿ ಒತ್ತಾಯಿಸಿದ್ದಾಳೆ. ಈ ವೇಳೆ ಮೂವರು ಆರೋಪಿಗಳು ಆಕೆಯನ್ನು ಕೊಲೆ ಮಾಡಿ ದೇಹವನ್ನು ಮೂರು ಭಾಗಮಾಡಿ ಚರಂಡಿಗೆ ಎಸೆದಿದ್ದರು ಎಂದು ಪೊಲೀಸರ ಬಳಿ ಬಾಯ್ಬಿಟ್ಟಿದ್ದಾನೆ.

Comments are closed.