ಕರ್ನಾಟಕ

ಫ‌ಲ ನೀಡಿದ ದೇವೇಗೌಡರು ಶೃಂಗೇರಿಯಲ್ಲಿ ನಡೆಸಿದ ಅತಿರುದ್ರ ಮಹಾಯಾಗ!

Pinterest LinkedIn Tumblr


ಬೆಂಗಳೂರು: ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕೆಂದು ಚುನಾವಣೆ ಪ್ರಕ್ರಿಯೆ ಪ್ರಾರಂಭದಲ್ಲೇ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಶೃಂಗೇರಿಯಲ್ಲಿ ಅತಿರುದ್ರ ಮಹಾಯಾಗ ನಡೆಸಿದ್ದರು. ಜತೆಗೆ, ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿಯನ್ನು ದೇವರ ಸನ್ನಿಧಿಯಲ್ಲಿಟ್ಟು ಪೂಜೆ ಮಾಡಿಸಿದ ನಂತರ ಘೋಷಣೆ ಮಾಡಿದ್ದರು. ಬಿ ಫಾರಂ ಸಹ ದೇವರ ಸನ್ನಿಧಿಯಲ್ಲಿಟ್ಟು ತಂದಿದ್ದರು.

ನಂತರ ಎಚ್‌.ಡಿ.ಕುಮಾರಸ್ವಾಮಿ ಸಹ ಆದಿಚುಂಚನಗಿರಿ ಕಾಲಭೈರವೇಶ್ವರನ ಸನ್ನಿಧಿಯಲ್ಲಿ 9 ಅಮಾವಾಸ್ಯೆ ಪೂಜೆ ನೆರವೇರಿಸಿದ್ದರು. ಫ‌ಲಿತಾಂಶದ ದಿನವೂ ಆದಿಚುಂಚನಗಿರಿಯಲ್ಲಿ ನಡೆದ ಹೋಮದಲ್ಲಿ ಪಾಲ್ಗೊಂಡಿದ್ದರು. ಯಡಿಯೂರಪ್ಪ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯ ಮುನ್ನಾ ದಿನವೂ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ದೇವೇಗೌಡರು ತಿರುಪತಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರು.

ಇದೀಗ ಮತ್ತೆ ದೇವೇಗೌಡರು ಶೃಂಗೇರಿಗೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗಿದೆ. ತಮ್ಮ ಹುಟ್ಟುಹಬ್ಬದ ದಿನದಂದು ಜೆಡಿಎಸ್‌ ಅಧಿಕಾರಕ್ಕೆ ಬರಬೇಕು ಎಂದು ದೇವೇಗೌಡರು ಬಯಸಿದ್ದರು. ತಡವಾಗಿಯಾದರೂ ಅವರ ಆಸೆ ನೆರವೇರಿದಂತಾಗುತ್ತಿದೆ.

Comments are closed.