ಕರ್ನಾಟಕ

ಇನ್ನೂ ಎರಡು-ಮೂರು ದಿನಗಳು ರಾಜ್ಯದಲ್ಲಿ ಮಳೆಯ ವಾತಾವರಣ ಸಾಧ್ಯತೆ

Pinterest LinkedIn Tumblr


ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಶುಕ್ರವಾರ ಮತ್ತೆ ಗುಡುಗು ಸಹಿತ ಮಳೆಯಾಗಿದ್ದು, ಇನ್ನೂ ಎರಡು-ಮೂರು ದಿನಗಳು ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.

ಉತ್ತರ ಭಾರತದಿಂದ ರಾಜ್ಯದ ಉತ್ತರ ಒಳನಾಡಿನವರೆಗೂ “ಕಡಿಮೆ ಒತ್ತಡದ ತಗ್ಗು'(ಟ್ರಫ್) ಕಂಡು ಬಂದ ಹಿನ್ನೆಲೆಯಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ಪೂರ್ವಮುಂಗಾರಿನಲ್ಲಿ ಈ ಬೆಳವಣಿಗೆಗಳು ಸಾಮಾನ್ಯವಾಗಿದ್ದು, ಇನ್ನೂ ಎರಡು-ಮೂರು ದಿನ ಮಳೆಯಾಗುವ ನಿರೀಕ್ಷೆ ಇದೆ.

ಅದರಲ್ಲೂ ದಕ್ಷಿಣ ಒಳನಾಡು ಮತ್ತು ಮಲೆನಾಡಿನಲ್ಲಿ ಸಾಧಾರಣ ಹಾಗೂ ಉತ್ತರ ಒಳನಾಡಿನ ಆಯ್ದ ಭಾಗಗಳಲ್ಲಿ ತುಂತುರು ಹನಿಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಡಿಎಂಸಿ)
ತಜ್ಞರು ತಿಳಿಸಿದ್ದಾರೆ. ಸತತ 2-3 ದಿನಗಳು ಮಳೆ ಆಗುತ್ತಿರುವುದ ರಿಂದ ಉಷ್ಣಾಂಶ ಏಕಾಏಕಿ ಇಳಿಕೆಯಾಗಿದೆ. ವಿಶೇಷವಾಗಿ ಉತ್ತರ ಒಳನಾಡಿನ ಬಹುಭಾಗಗಳಲ್ಲಿ ಕನಿಷ್ಠ 1ರಿಂದ ಗರಿಷ್ಠ 5 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಕುಸಿದಿದೆ. ಬಿಸಿಲಿನ ಧಗೆಗೆ ಕಂಗೆಟ್ಟಿದ್ದ ಜನ ಮಳೆಯಿಂದ ತುಸು ನಿಟ್ಟುಸಿರು ಬಿಡುವಂತಾಗಿದೆ.

ಬೆಂಗಳೂರು ನಗರದಲ್ಲಿ ಗರಿಷ್ಠ ಮಳೆ: ಈ ಮಧ್ಯೆ, ಶುಕ್ರವಾರ ಬೆಂಗಳೂರು ನಗರ ಮತ್ತು ಹಾಸನದಲ್ಲಿ ಗರಿಷ್ಠ 32 ಮಿ.ಮೀ.ಮಳೆಯಾಗಿದೆ.

ಚಿಕ್ಕಬಳ್ಳಾಪುರದಲ್ಲಿ 20.5 ಮಿ.ಮೀ., ಮೈಸೂರು 26.5, ಮಂಡ್ಯ 18.5, ಕೋಲಾರ 25.5, ತುಮಕೂರು 15.5, ಉಡುಪಿ 8.6, ಬೀದರ್‌ 10.5, ಬೆಂಗಳೂರು ಗ್ರಾಮಾಂತರದಲ್ಲಿ 17 ಮಿ.ಮೀ. ಮಳೆ ದಾಖಲಾಗಿದೆ. ಚಿತ್ರದುರ್ಗದಲ್ಲಿ
ಸಾಮಾನ್ಯಕ್ಕಿಂತ 5 ಡಿಗ್ರಿ ಮತ್ತು ಬೆಳಗಾವಿ ವಿಮಾನ ನಿಲ್ದಾಣದಲ್ಲಿ 4 ಡಿಗ್ರಿ ಕಡಿಮೆ ತಾಪಮಾನ ದಾಖಲಾಗಿದೆ. ಉಳಿದಂತೆ ಗದಗ ಮತ್ತು ರಾಯಚೂರಿನಲ್ಲಿ 3, ಬೆಂಗಳೂರು 2,ಮೈಸೂರು, ಕಲಬುರಗಿ, ವಿಜಯಪುರ, ಬಳ್ಳಾರಿ,
ಮಂಡ್ಯದಲ್ಲಿ ಉಷ್ಣಾಂಶ ತಲಾ 1 ಡಿಗ್ರಿ ಸೆಲ್ಸಿಯಸ್‌ ಕಡಿಮೆ ಇತ್ತು.

Comments are closed.