ಕರ್ನಾಟಕ

ನಮ್ಮ ಸೋಲಿಗೆ ಕಾಂಗ್ರೆಸ್ ಮುಖಂಡರಾದ ಎಸ್.ಆರ್.ಪಾಟೀಲ್, ಆರ್.ಬಿ‌.ತಿಮ್ಮಾಪೂರ ಕಾರಣ, ತಿಮ್ಮಾಪೂರ್: ಕಾಶಪ್ಪನವರ್

Pinterest LinkedIn Tumblr


ಬಾಗಲಕೋಟ: ಚುನಾವಣೆ ಸೋಲಿನ ಹಿನ್ನಲೆಯಲ್ಲಿ ನಡೆದ ಕಾಂಗ್ರೆಸ್‌ ಆತ್ಮಾವಲೋಕನ ಸಭೆಯಲ್ಲಿ ವಿಜಯಾನಂದ ಕಾಶಪ್ಪನವರ್‌ ಕಣ್ಣೀರಿಟ್ಟರು. ಇಳಕಲ್‌ನಲ್ಲಿ ನಡೆದ ಕಾಂಗ್ರೆಸ್‌ನ ಆತ್ಮಾವಲೋಕನ ಸಭೆಯಲ್ಲಿ ಹುನಗುಂದ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಫರ್ಧಿಸಿ ಸೋಲು ಕಂಡ ಕಾಶಪ್ಪನವರ್‌, ನಮ್ಮ ಸೋಲಿಗೆ ಕಾಂಗ್ರೆಸ್ ಮುಖಂಡರಾದ ಎಸ್.ಆರ್.ಪಾಟೀಲ್ ಮತ್ತು ಆರ್.ಬಿ‌.ತಿಮ್ಮಾಪೂರ ಕಾರಣ. ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಲಿ ಎಂದು ಹೇಳಿದರು.

ಬಾದಾಮಿಯಲ್ಲೂ ಸಿದ್ದರಾಮಯ್ಯ ಅವನ್ನು ಸೋಲಿಸಲು ಪ್ರಯತ್ನಿಸಿದ್ದರು. ಆದರೆ ಬನಶಂಕರಿ ದೇವಿ ಆಶೀರ್ವಾದದಿಂದ ಸಿದ್ದರಾಮಯ್ಯ ಗೆದ್ದಿದ್ದಾರೆ. ಪಕ್ಷ ದ್ರೋಹ ಮಾಡುವುದು ಇವರ ಕಾಯಕ. ಶುಕ್ರವಾರ ಎಐಸಿಸಿಗೆ ಇವರ ವಿರುದ್ದ ದೂರು ನೀಡುವುದಾಗಿ ಹೇಳಿದರು.

ಎಸ್.ಆರ್.ಪಾಟೀಲ್‌ ಮತ್ತು ಆರ್.ಬಿ‌.ತಿಮ್ಮಾಪೂರ ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು. ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ. ಧಂ ಇದ್ದರೆ ಎದುರಿಗೆ ಬಂದು ಹೋರಾಡಿ ಎಂದರು.

Comments are closed.