ಕರ್ನಾಟಕ

ಆಪರೇಷನ್ ಕಮಲಕ್ಕೆ ಚಾಲನೆ ! ನಿರೀಕ್ಷೆಗೂ ಮೀರಿದ ಬಹುಮತ ಪಡೆಯುತ್ತೇವೆ ಎಂದ ಶಾಸಕ ಶ್ರೀರಾಮುಲು

Pinterest LinkedIn Tumblr

ಬೆಂಗಳೂರು: ಬಿಜೆಪಿ ಈಗ ಸರ್ಕಾರ ರಚಿಸಿ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಬಿಜೆಪಿ ಯಾರೂ ಊಹಿಸಲಾಗದಷ್ಟು ಸಂಖ್ಯೆಯಲ್ಲಿ ಬಹುಮತ ಸಾಬೀತು ಮಾಡಲಿದೆ ಎಂದು ಶಾಸಕ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.

ಗುರುವಾರ ನಗರದಲ್ಲಿ ಸಿಎಂ ಪ್ರಮಾಣವಚನ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜತೆ ಅತ್ಯಂತ ವಿಶ್ವಾಸದಿಂದಲೇ ಮಾತನಾಡಿದ ಅವರು, ಸಿದ್ದರಾಮ್ಯಯ ಅವರು ಬೇರೆ ದಾರಿಯಲ್ಲಿ ಅಧಿಕಾರ ಹಿಡಿಯಲು ಹವಣಿಕೆ ಮಾಡುತ್ತಿದ್ದಾರೆ. ಸರ್ಕಾರ ಅಧಿಕಾರದಲ್ಲಿದ್ದಾಗ ಜನಪರವಾದ ಯಾವ ಕೆಲಸವನ್ನೂ ಅವರು ಮಾಡಿಲ್ಲ ಎಂದರು.

ಬಿಜೆಪಿ ಅಧಿಕಾರ ಮಾಡಲು ಜನ ಆದೇಶ ನೀಡಿದ್ದಾರೆ. ಅದರಂತೆ, ಯಡಿಯೂರಪ್ಪ ಅವರು ಇಂದು ಪ್ರಮಾಣವಚನ ಸ್ವೀರಿಸಿದ್ದಾರೆ. ನಾವು ಬಹುಮತ ಸಾಬೀತು ಮಾಡುತ್ತೇವೆ ಎಂದು ಹೇಳಿದರು.

104 ಸ್ಥಾನ ಇರುವ ನೀವು ಬಹುಮತವನ್ನು ಹೇಗೆ ಸಾಬೀತುಪಡಿಸುವಿರಿ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀರಾಮುಲ, ಪಕ್ಷೇತರರು ಸಂಪರ್ಕದಲ್ಲಿದ್ದಾರೆ. ಬಹಳಷ್ಟು ಜನ ನಮ್ಮ ಜತೆ ಬರುತ್ತಾರೆ. ನಮ್ಮ ಜತೆಗೆ ನೀವು ಊಹಿಸಲೂ ಸಾಧ್ಯವಾಗದಷ್ಟು ಜನ ಬರುತ್ತಾರೆ ಮತ್ತು ಬಹುಮತವನ್ನೂ ನೀಡಲಿದ್ದಾರೆ. ಕಾದು ನೋಡಿ ಎಂದರು.

ಆಪರೇಷನ್ ಕಮಲ … ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಸೇರಿ ಇಬ್ಬರು ಶಾಸಕರು ನಾಪತ್ತೆ
ಇನ್ನು ಪ್ರಸ್ತುತ ಅಧಿಕಾರಕ್ಕೇರಿರುವ ಬಿಜೆಪಿ ಸರ್ಕಾರವನ್ನು ಶತಾಯಗತಾಯ ಉಳಿಸಿಕೊಳ್ಳಲು ಹವಣಿಸುತ್ತಿರುವ ಬಿಜೆಪಿ ನಾಯಕರು ಈಗಾಗಲೇ ಆಪರೇಷನ್ ಕಮಲ ಜಾರಿ ಮಾಡಿದ್ದು, ಇದರ ಪರಿಣಾಮವೇನೋ ಎಂಬಂತೆ ಕಾಂಗ್ರೆಸ್ ನ ಇಬ್ಬರು ಶಾಸರು ನಾಪತ್ತೆಯಾಗಿದ್ದಾರೆ. ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಹಾಗೂ ಶಾಸಕ ಪ್ರತಾಪ್ ಗೌಡ ನಾಪತ್ತೆಯಾಗಿದ್ದು, ಈ ಇಬ್ಬರು ಶಾಸಕರು ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿಲ್ಲ, ಇದೇ ವಿಚಾರವಾಗಿ ಮಾತನಾಡಿದ್ದ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಆನಂದ್ ಸಿಂಗ್ ತಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ ಅವರು ಪ್ರಧಾನಿ ಮೋದಿ ಹಿಡಿತದಲ್ಲಿ ಇರಬಹುದು ಎಂದು ಹೇಳಿದ್ದಾರೆ.

Comments are closed.